ದೇಶ

ಇಮ್ರಾನ್ ಖಾನ್ ಮಹಾನ್ ಎಡವಟ್ಟಿಗೆ ಆನಂದ್ ಮಹೀಂದ್ರ 'ಮಂಗ'ಳಾರತಿ'!

Vishwanath S

ಇಸ್ಲಾಮಾಬಾದ್/ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ವಶಪಡಿಸಿಕೊಳ್ಳಬಹುದೇನೋ ಎಂಬ ಆಂತಕದಲ್ಲಿ ಸ್ಥಿಮಿತ ಕಳೆದುಕೊಂಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎಡವಟ್ಟೊಂದನ್ನು ಮಾಡಿಕೊಂಡಿದ್ದು ಅದಕ್ಕೆ ಭಾರತದ ಖ್ಯಾತ ಉದ್ಯಮಿ ಆನಂದ್ ಮಹೇಂದ್ರ ಕಾಲೆಳೆದಿದ್ದಾರೆ.

ಇರಾನ್ ಅಧ್ಯಕ್ಷ ರೌಹಾನಿ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್ ಎರಡನೇ ವಿಶ್ವ ಯುದ್ಧ ನಂತರ ಜರ್ಮನಿ ಮತ್ತು ಜಪಾನ್ ಗಡಿಯಲ್ಲಿ ಎರಡೂ ದೇಶಗಳು ಜಂಟಿಯಾಗಿ ಕಾರ್ಖಾನೆ ಸ್ಥಾಪಿಸಿವೆ ಎಂದು ಹೇಳಿದ್ದರು. ಇದಾದ ಬಳಿಕ ಇಮ್ರಾನ್ ಖಾನ್ ಹೇಳಿಕೆಗೆ ಸ್ವತಃ ಪಾಕಿಸ್ತಾನದ ಪ್ರಜೆಗಳೇ ಅವರ ಕಾಲೆಳೆದಿದ್ದರು. 

ಇದೀಗ ಆನಂದ್ ಮಹೇಂದ್ರ ಅವರು ಟ್ವೀಟ್ ವೊಂದನ್ನು ಮಾಡಿ ಭಗವಂತ ನಿನಗೆ ಧನ್ಯವಾ. ಈ ಜಂಟಲ್ ಮ್ಯಾನ್ ನನ್ನ ಇತಿಹಾಸ ಅಥವಾ ಭೌಗೋಳಿಕ ಶಿಕ್ಷಕನಾಗದಿದ್ದಕ್ಕೆ ನಾನು ಬಚಾವ್ ಎಂದು ಟ್ವೀಟ್ ಮಾಡಿ ಪಾಕ್ ಪ್ರಧಾನಿ ಕಾಲೆಳೆದಿದ್ದಾರೆ.

ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಅವರು ವಿಡಿಯೋ ಟ್ವೀಟ್ ಮಾಡಿ ಮಾಡಿದ್ದು ಜರ್ಮನಿ ಹಾಗೂ ಜಪಾನ್ ಗಡಿ ಹಂಚಿಕೊಂಡಿದ್ಯಾ? ಇದು ಪಾಕಿಸ್ತಾನದ ಪ್ರಧಾನಿಯವರ ಅಧ್ಯಯನ ಎಂದು ವ್ಯಂಗ್ಯವಾಡಿದ್ದರು. 

SCROLL FOR NEXT