ದೇಶ

ಗಗನಕ್ಕೇರಿದ ಈರುಳ್ಳಿ ದರ: ಕ್ಯಾಬೇಜ್, ಕ್ಯಾರೆಟ್ ಮೊರೆ ಹೋದ ಗೋವಾ ರೆಸ್ಟೋರೆಂಟ್!

Manjula VN

ಪಣಜಿ: ಈರುಳ್ಳಿ ಬೆಲೆ ಗಗನಕ್ಕೇರಿ ಕುಳಿತಿರುವುದು ದೇಶದಾದ್ಯಂತ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿರುವುದು ಹಳೇ ಸುದ್ದಿ. ಹೊಸ ಸುದ್ದಿ ಏನೆಂದರೆ, ಈರುಳ್ಳಿ ಬೆಲೆ ಏರಿಕೆಯಾಗಿರುವುದು ಗೋವಾದಲ್ಲಿ ಪ್ರವಾಸೋದ್ಯಮಕ್ಕೂ ಭಾರೀ ಹೊಡೆತ ನೀಡಿದೆಯಂತೆ.

ಈ ವಿಚಾರವನ್ನು ಸ್ವತಃ ರಾಜ್ಯದ ಬಂದರೂ ಖಾತೆ ಸಚಿವ ಮತ್ತು ರಾಜ್ಯದಲ್ಲಿ ಹಲವು ಹೋಟೆಲ್, ಬಾರ್ ಹೊಂದಿರುವ ಸಚಿವ ಮೈಕೆಲ್ ಲೋಬೋ ಬಹಿರಂಗಪಡಿಸಿದ್ದಾರೆ. 

ಭಾರತೀಯ ಪ್ರವಾಸಿಗರು ಊಟದ ಜೊತೆಗೆ ಈರುಳ್ಳಿ ಮತ್ತು ಮೆಣಸಿನ ಕಾಯಿ ಬಯಸುತ್ತಾರೆ. ಆದರೆ, ಬೆಲೆ ಏರಿಕೆ ಕಾರಣ, ಗೋವಾ ರೆಸ್ಟೋರೆಂಟ್ ಗಳಲ್ಲಿ ಈರುಳ್ಳಿ ಬದಲಿಗೆ ಎಲೆಕೋಸು ಹಾಗೂ ಕ್ಯಾರೆಟ್ ನೀಡಲಾಗುತ್ತಿದೆ. ಇದಕ್ಕೆ ಗ್ರಾಹಕರು ಭಾರೀ ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 

ಇದರ ಪರಿಣಾಮ ಇದೀಗ ಗೋವಾದತ್ತ ಮುಖ ಮಾಡುವುದನ್ನು ಪ್ರವಾಸಿಗರು ಬಿಟ್ಟಿದ್ದಾರೆ ಎಂದು ಲೋಬೋ ಹೇಳಿದ್ದಾರೆ. ಗೋವಾ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ ರೂ.170 ಇದೆ. 

SCROLL FOR NEXT