ದೇಶ

ಪೌರತ್ವ ಸಾಬೀತು ಪಡಿಸಲು ಯಾವುದೇ ದಾಖಲೆ ಸಲ್ಲಿಸುವುದಿಲ್ಲ: ಸಸಿಕಾಂತ್ ಸೆಂಥಿಲ್

Srinivasamurthy VN

ಬೆಂಗಳೂರು: ತನ್ನ ಪೌರತ್ವ ಸಾಬೀತು ಪಡಿಸಲು ಯಾವುದೇ ರೀತಿಯ ದಾಖಲೆ ಸಲ್ಲಿಸುವುದಿಲ್ಲ ಎಂದು ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಜಿ ಐ.ಎ.ಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಖಾರವಾಗಿ ಪತ್ರ ಬರೆದಿದ್ದಾರೆ.

ಸಿಎಬಿ(ಪೌರತ್ವ ಮಸೂದೆ) ಅಂಗೀಕಾರವಾದ ದಿನ “ಆಧುನಿಕ ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿದೆ. ತಾನು ಪೌರತ್ವ ಮಸೂದೆಯನ್ನು ಸ್ವೀಕರಿಸುವುದಿಲ್ಲ, ಭಾರತೀಯನೆಂದು ಪೌರತ್ವವನ್ನು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವುದಿಲ್ಲ ಮತ್ತು ನನ್ನ ಅಸಹಕಾರಕ್ಕಾಗಿ ಭಾರತ ದೇಶವು ನನ್ನ ಮೇಲೆ ಕ್ರಮ ಕೈಗೊಂಡರೆ ಸ್ವೀಕರಿಸುತ್ತೇನೆ ಎಂದು ಸೆಂಥಿಲ್ ಪತ್ರದಲ್ಲಿ ಸವಾಲು ಹಾಕಿದ್ದಾರೆ.

ಈ ದೇಶದಲ್ಲಿ ಹುಟ್ಟಿ ಬೆಳೆದು ನಾನು ನನ್ನ ಪೌರತ್ವ ಸಾಬೀತು ಪಡಿಸಬೇಕಾಗಿರುವುದು ದುರದೃಷ್ಟಕರ. ನನ್ನ ಪೌರತ್ವವನ್ನು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸದೆ ಎನ್ಆರ್ ಸಿ ಗಣತಿಗೆ ಅಸಹಕಾರ ನೀಡುತ್ತೇನೆ. ಒಂದು ವೇಳೆ ನಾನು ಈ ದೇಶದ ನಾಗರೀಕನಲ್ಲ ಎಂದು ಗುರುತಿಸಿದರೆ ನೀವು ನಿರ್ಮಿಸುತ್ತಿರುವ ಅನೇಕ “ವಲಸೆ ಕೇಂದ್ರ” ಭರ್ತಿ ಮಾಡಲು ನನಗೆ ಸಂತೋಷವಾಗುತ್ತದೆ. ಯಾಕೆಂದರೆ ಸರ್ಕಾರ ದೇಶಾದ್ಯಂತ ಪ್ರತಿ ಹೆಜ್ಜೆಗೂ ಇಂತಹ ಕೇಂದ್ರಗಳನ್ನು ತೆರೆಯಬೇಕಾದಿತು. ಹೀಗಾಗಿ ಜನ ವಿರೋಧಿ ಮಸೂದೆಯ ಬಗ್ಗೆ ಮೌನವಾಗಿರುವುದಕ್ಕಿಂತ ಇದನ್ನು ವಿರೋಧಿಸಿ ನೀವು ಕೈಗೊಳ್ಳುವ ಕ್ರಮವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದು ಸೆಂಥಿಲ್ ಹೇಳಿದ್ದಾರೆ.

SCROLL FOR NEXT