ದೇಶ

ಎನ್ ಪಿ ಆರ್, ಎನ್ ಆರ್ ಸಿ ಕುರಿತ ಅಪಪ್ರಚಾರದಿಂದ ಅಲ್ಪಸಂಖ್ಯಾತರು,ಬಡವರಿಗೆ ಅನ್ಯಾಯ; ಅಮಿತ್ ಶಾ

Srinivas Rao BV

ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಸಂಬಂಧ ನಡೆಸುತ್ತಿರುವ ಪ್ರತಿಪಕ್ಷಗಳ ಅಪಪ್ರಚಾರದಿಂದ ದೇಶದ ಅಲ್ಪಸಂಖ್ಯಾತರು ಹಾಗೂ ಬಡವರು ತೊಂದರೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ಹೇಳಿದ್ದಾರೆ. 

ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಆಡಳಿತ ಅವಧಿಯಲ್ಲಿ ಎನ್ಪಿಆರ್ ಅನ್ನು ರೂಪಿಸಿದ್ದರು ಎಂದು ಹೇಳಿರುವ ಅವರು, 2015 ರಲ್ಲಿ ನಡೆಸಿದ ಮನೆ ಮನೆಗಳ ಸಮೀಕ್ಷೆಯ ಮಾಹಿತಿ ಆಧಾರದ ಮೇಲೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ನವೀಕರಣಕ್ಕೆ ಚಾಲನೆ ನೀಡಲಾಗುತ್ತದೆ. 2015ರಲ್ಲಿ ಕೈಗೊಂಡಿದ್ದ ಮನೆಮನೆ ಸಮೀಕ್ಷೆಗಳಲ್ಲಿ ಸಂಗ್ರಹಿಸಿರುವ ದತ್ತಾಂಶ ಆಧಾರದ ಮೇಲೆ  ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. 

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ. ಎನ್‌ಪಿಆರ್ ಪೂರ್ಣಗೊಂಡು, ಅಧಿಕೃತ ಮುದ್ರಣವಾದ  ನಂತರ ಅದನ್ನೇ ಎನ್‌ಆರ್‌ಸಿಗೆ ಆಧಾರವನ್ನಾಗಿ ಸರ್ಕಾರ ಪರಿಗಣಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನಲೆಯಲ್ಲಿ ಎನ್‌ಪಿಆರ್ ಹಾಗೂ ಎನ್ ಆರ್ ಸಿಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. 

SCROLL FOR NEXT