ದೇಶ

ಪ್ರಧಾನಿ ಮೋದಿಗಾಗಿ ಗುಡಿ ಕಟ್ಟಿದ ತಮಿಳುನಾಡು ರೈತ

Manjula VN

ಕೊಯಮತ್ತೂರು: ತಮಿಳುನಾಡಿನ ತಿರುಚಿರಾಪಳ್ಳಿಯ ರೈತನೊಬ್ಬ ತನ್ನ ಹೊಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಾಗಿ ಗುಡಿಯೊಂದನ್ನು ನಿರ್ಮಾಣ ಮಾಡಿದ್ದಾನೆ. 

ಏರಾಕುಡಿ ಗ್ರಾಮದ 50 ವರ್ಷದ ಪಿ.ಶಂಕರ್ ಎನ್ನುವವರು ತಮ್ಮ ಹೊಲದಲ್ಲಿ ನಿರ್ಮಿಸಿದ ಮೋದಿ ದೇವಾಲಯವನ್ನು ಕಲೆದ ವಾರ ಉದ್ಘಾಟನೆ ಮಾಡಿದ್ದಾರೆ. 

ಈ ಗುಡಿ 8 ಚದರ ಅಡಿ ವಿಸ್ತೀರ್ಣ ಇದ್ದು, ಗುಡಿಯಲ್ಲಿರುವ ಮೋದಿ ಪ್ರತಿಮೆಗೆ ಅವರು ಪ್ರತೀನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ಮೋದಿಅವರ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಕಲ್ಯಾಣ ಯೋಜನೆಯಿಂದ ಪ್ರಭಾವಿತಗೊಂಡು ಗುಂಡಿಯನ್ನು ನಿರ್ಮಿಸಿದ್ದೇನೆ. ಈ ಗುಡಿ ನಿರ್ಮಾಣಕ್ಕೆ ರೂ.1.2 ಲಕ್ಷ ವೆಚ್ಚವಾಗಿದೆ ಎಂದು ಶಂಕರ್ ತಿಳಿಸಿದ್ದಾರೆ. 

ಅಯ್ಯ (ಮೋದಿ) ಅವರಿಗಾಗಿ ದೇಗುಲ ನಿರ್ಮಾಣ ಮಾಡಲು 8 ತಿಂಗಳ ಹಿಂದೆಯೇ ಆಲೋಚನೆ ನಡೆಸಿದ್ದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದೀಗ ವಾರಗಳ ಹಿಂದೆ ದೇಗುಲ ಉದ್ಘಾಟನೆ ಮಾಡಲಾಯಿತು ಎಂದಿದ್ದಾರೆ. 

ಪ್ರಧಾನಮಂತ್ರಿ ಕಿಸಾನ್ ಸಮ್ಮನಾ ನಿಧಿಯಿಂದ ರೂ.2,000 ಬರುತ್ತಿದೆ. ವೈಯಕ್ತಿಕವಾಗಿಯೂ ಮೋದಿಯೆಂದರೆ ನನಗೆ ಬಹಳ ಇಷ್ಟ. ಅವರನ್ನು ಬಹಳ ವರ್ಷದಿಂದ ನೋಡುತ್ತಲೇ ಇದ್ದೇನೆಂದಿದ್ದಾರೆ. 

ಇನ್ನು ಸಂಕರ್ ಅವರು ಬಿಜೆಪಿ ಕಾರ್ಯಕರ್ತರೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಇವರು ಯಾವುದೇ ಸ್ಥಳೀಯ, ರಾಷ್ಟೀಯ ಮಂಡಳಿಗಳಲ್ಲಿ ಸದಸ್ಯರಲ್ಲ ಎಂಬುದು ಖಚಿತಗೊಂಡಿದೆ. 

SCROLL FOR NEXT