ದೇಶ

ನೋಟು ನಿಷೇಧಕ್ಕಿಂತಲೂ ಘೋರ ಎನ್'ಪಿಆರ್, ಎನ್ಆರ್'ಸಿ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಕಿಡಿ

Manjula VN

ನವದೆಹಲಿ: ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ನೋಟು ನಿಷೇಧಕ್ಕಿಂತಲೂ ಎನ್'ಪಿಆರ್ (ರಾಷ್ಟ್ರೀಯ ಜನಸಂಖ್ಯೆ ನೋಂದಣಿ), ಎನ್ಆರ್'ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಹಾನಿಕಾರಕವಾಗಿದೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ 135ನೇ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಎಐಸಿಸಿ ಕಚೇರಿಯಲ್ಲಿ ಬಾವುಟ ಹಾರಿಸಿದ ಬಳಿಕ ಸುದ್ದಿಗಾರರೊದಿಗೆ ಮಾತನಾಡಿದ ರಾಹುಲ್ ಅವರು, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಪ್ರಧಾನಿ ಮೋದಿಯವರು 15 ಆಪ್ತ ಸ್ನೇಹಿತರು ಯಾವುದೇ ದಾಖಲಾತಿಗಳನ್ನು ತೋರಿಸುವುದಿಲ್ಲ. ಯಾವುದೇ ಹಣವಾದರೂ ಮೊದಲು ಈ 15 ಸ್ನೇಹಿತರ ಜೇಬಿಗೆ ಹೋಗುತ್ತದೆ ಎಂದು ಹೇಳಿದ್ದಾರೆ. 

ನೋಟು ನಿಷೇಧಕ್ಕಿಂತಲೂ ಎನ್'ಪಿಆರ್ (ರಾಷ್ಟ್ರೀಯ ಜನಸಂಖ್ಯೆ ನೋಂದಣಿ), ಎನ್ಆರ್'ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಹೆಚ್ಚು ಅಪಾಯಕಾರಿಯಾಗಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಅಕ್ರಮ ವಲಸಿಗರ ಬಂಧನಕ್ಕೆ ಯಾವುದೇ ರೀತಿಯ ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಿಲ್ಲ ಎಂಬ ಮೋದಿಯವರ ಹೇಳಿಕೆ ವಿರುದ್ಧ ಕಿಡಿಕಾರಿರುವ ಅವರು, ನೀವು ನಾನು ಮಾಡಿದ್ದ ಟ್ವೀಟ್ ನೋಡಿರಬಹುದು. ಅದರಲ್ಲಿ ಮೋದಿಯವರ ಭಾಷಣವನ್ನು ಕೇಳಿರಬಹುದು. ವಿಡಿಯೋದಲ್ಲಿ ಭಾರತದಲ್ಲಿ ಯಾವುದೇ ನಿರಾಶ್ರಿತ ಕೇಂದ್ರಗಳಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ವಿಡಿಯೋದಲ್ಲಿ ಅಸ್ಸಾಂನಲ್ಲಿ ನಿರ್ಮಾಣವಾಗುತ್ತಿರುವ ನಿರಾಶ್ರಿತ ಕೇಂದ್ರಗಳ ವಿಡಿಯೋ ಇದೆ. ಈಗ ಸುಳ್ಳು ಹೇಳುತ್ತಿರುವುದು ಯಾರು ಎಂಬುದನ್ನು ನೀವೇ ನಿರ್ಧರಿಸಬಹುದು ಎಂದಿದ್ದಾರೆ. 

ಎನ್ಆರ್'ಸಿ ಆಗಲೀ ಎನ್'ಪಿಆರ್ ಆಗಲೀ ದೇಶದ ಜನರ ಮೇಲೆ ತೆರಿಗೆ ಬೀಳುತ್ತದೆ. ಇದನ್ನು ನೋಟು ನಿಷೇಧ ವಿಚಾರದಲ್ಲಿಯೇ ನೀವು ನೋಡಿದ್ದೀರಿ. ಸಾಮಾನ್ಯ ಜನರಿಗೆ ತೆರಿಗೆ ಬಿದ್ದಿತ್ತು. ಬ್ಯಾಂಕ್ ಹೋಗಿ ಹಣ ನೀಡಿ. ಆದರೆ, ಮತ್ತೆ ಹಣವನ್ನು ವಿತ್ಡ್ರಾ ಮಾಡಬೇಕಿ. ನಿಮ್ಮ ಖಾತಂಯಲ್ಲಿರುವ ಎಲ್ಲಾ ಹಣವೂ 15-20 ಶ್ರೀಮಂತರ ಕೈ ಸೇರಲಿದೆ. ಅದೇ ರೀತಿ ಎನ್'ಪಿಆರ್' ಮತ್ತು ಎನ್ಆರ್'ಸಿ ವಿಚಾರದಲ್ಲಿ ಹಾಗೆಯೇ ಆಗುತ್ತದೆ ಎಂದು ಹೇಳಿದ್ದಾರೆ. 

SCROLL FOR NEXT