ದೆಹಲಿಯಲ್ಲಿ ದಾಖಲೆ ಬರೆದ ಚಳಿ 
ದೇಶ

119 ವರ್ಷಗಳ ದಾಖಲೆ ಮುರಿದ ದೆಹಲಿಯ ಡಿಸೆಂಬರ್ ಚಳಿ!

ಈ ಬಾರಿ ಚಳಿಗಾಲ ಉತ್ತರ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ರಾಜಧಾನಿ ದೆಹಲಿಯಲ್ಲಿ ಇಂದು ತಾಪಮಾನ 119 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದಿದೆ.

ನವದೆಹಲಿ: ಈ ಬಾರಿ ಚಳಿಗಾಲ ಉತ್ತರ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ರಾಜಧಾನಿ ದೆಹಲಿಯಲ್ಲಿ ಇಂದು ತಾಪಮಾನ 119 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದಿದೆ.

ಹೌದು.. ರಾಷ್ಟ್ರ ರಾಜಧಾನಿ ದೆಹಲಿ ಚಳಿ ಬರೊಬ್ಬರಿ 119 ವರ್ಷಗಳ ದಾಖಲೆಯನ್ನು ಮುರಿದಿದ್ದು, ಈ ಕುರಿತಂತೆ ಕೇಂದ್ರ ಹವಮಾನ ಇಲಾಖೆ ಮಾಹಿತಿ ನೀಡಿದೆ. 1901ರಲ್ಲಿ ದಾಖಲಾಗಿದ್ದ ಕನಿಷ್ಛ ತಾಪಮಾನಕ್ಕಿಂತಲೂ ಇಂದು ದೆಹಲಿಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಹವಾಮಾನ ಇಲಾಖೆ, 1901ರಲ್ಲಿ ದೆಹಲಿಯಲ್ಲಿ ಮಧ್ಯಾಹ್ನ 02:30ರ ವೇಳೆಗೆ  9.4 ಡಿಗ್ರಿ ಯಷ್ಟು ತಾಪಮಾನ ದಾಖಲಾಗಿತ್ತು. ಆದರೆ ಇಂದು ದೆಹಲಿಯಲ್ಲಿ ಮಧ್ಯಾಹ್ನ 02:30ರ ವೇಳೆಗೆತಾಪಮಾನ 9ಡಿಗ್ರಿಗೆ ಳಿಯುವ ಮೂಲಕ ಆ 119 ವರ್ಷಗಳ ಹಳೆಯ ಶತಮಾನದ ದಾಖಲೆಯನ್ನು ಹಿಂದಿಕ್ಕಿದೆ. ಆ ಮೂಲಕ ದೆಹಲಿಯ 119 ವರ್ಷಗಳ ಇತಿಹಾಸದಲ್ಲಿಯೇ ಡಿಸೆಂಬರ್ ನ ಅತ್ಯಂತ ಚಳಿಯ ದಿನವಾಗಿದೆ. ಇನ್ನು ದೆಹಲಿಯ ಪಾಲಂನಲ್ಲಿ 9 ಡಿಗ್ರಿ ತಾಪಮಾನ ದಾಖಲಾಗಿದ್ದು, ಸಫ್ದರ್ ಜಂಗ್ ಪ್ರದೇಶದಲ್ಲಿ 9.4 ಡಿಗ್ರಿ ತಾಪಮಾನ ದಾಖಲಾಗಿದೆ.

ಈ ಹಿಂದೆ ವಾರದ ಹಿಂದಯಷ್ಟೇ ದೆಹಲಿಯಲ್ಲಿ ಕನಿಷ್ಠ ತಾಪಮಾನ 2.4 ಡಿಗ್ರಿಗೆ ಇಳಿಕೆಯಾಗಿ ದಾಖಲೆ ನಿರ್ಮಾಣವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT