ಅನುರಾಧ ಮತ್ತು ಮೊಯ್ಲಿ ಕಪೂರ್ 
ದೇಶ

ದೆಹಲಿ: ಒಂದೇ ಮನೆ ಐವರಿಗೆ 5ಬಾರಿ ಮಾರಾಟ; ಖತರ್ನಾಕ್ ಅಮ್ಮ-ಮಗಳು ಅಂದರ್

ದೆಹಲಿಯ ಐಷಾರಾಮಿ ಬಂಗಲೆಗಳಿರುವ ಪ್ರದೇಶದಲ್ಲಿ ಮನೆ ಖರೀದಿಸಲು ಹಣ ಹೊಂದಿರುವ ಶ್ರೀಮಂತರು ಮುಂದೆ ಬರುತ್ತಾರೆ, ಇದನ್ನು ಬಂಡವಾಳವಾಗಿಸಿಕೊಂಡ ...

ನವದೆಹಲಿ: ದೆಹಲಿಯ ಐಷಾರಾಮಿ ಬಂಗಲೆಗಳಿರುವ ಪ್ರದೇಶದಲ್ಲಿ ಮನೆ ಖರೀದಿಸಲು ಹಣ ಹೊಂದಿರುವ ಶ್ರೀಮಂತರು ಮುಂದೆ ಬರುತ್ತಾರೆ, ಇದನ್ನು ಬಂಡವಾಳವಾಗಿಸಿಕೊಂಡ ಖತರ್ನಾಕ್ ಜೋಡಿಯೊಂದು ಒಂದೇ ಮನೆಯನ್ನು ಐವರಿಗೆ ಮಾರಾಟ
ಮಾಡಿ ಹಣ ಪೀಕುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಲಂಡನ್ ನಲ್ಲಿ ಎಂಬಿಎ ಪದವಿ ಪೂರೈಸಿರುವ ಅನುರಾಧ ಕಪೂರ್ ಹಾಗೂ ಆಕೆಯ ತಾಯಿ, ಮೊಲ್ಲಿ ಇಬ್ಬರು ಸೇರಿ ತಮ್ಮ ಗ್ರೇಟರ್ ಕೈಲಾಶ್ ಹೌಸ್ ನ ದಾಖಲೆಗಳನ್ನು  ಫೋರ್ಜರಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ಜನಕ್ಕೆ ವಂಚಿಸಿದ ಇವರು ಹಣ ದೆಹಲಿಯ ಐಷಾರಾಮಿ ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡಿ, ಲಂಡನ್,  ಅಮೆರಿಕಾ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಪ್ರವಾಸ ಮಾಡಿ ಮಜಾ ಮಾಡುತ್ತಿದ್ದರು.
ಇಬ್ಬರನ್ನು ಬಂಧಿಸಿರುವ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಗಳ ಅಡಿಯಲ್ಲಿ  ಪ್ರಕರಣ ದಾಖಲಿಸಲಾಗಿದೆ.ಪ್ರಕರ ದಾಖಲಾದಾಗಿನಿಂದ ಇಬ್ಬರು ನಾಪತ್ತೆಯಾಗಿದ್ದರು, ನಂತರ ಇಬ್ಬರನ್ನು  ಸೂರ್ಯ ಹೊಟೇಲ್ ನಲ್ಲಿ ಬಂಧಿಸಲಾಗಿದೆ.
ದೆಹಲಿ ವಿವಿಯಲ್ಲಿ ಪದವಿ ಪೂರೈಸಿದ, ಅನುರಾಧ ಲಂಡನ್ ನಲ್ಲಿ ಎಂಬಿಎ ಪದವಿ ಪಡೆದಿದ್ದಳು, ಬೇಗ ಹಣ ಸಂಪಾದಿಸಲು ಹಾಗೂ ಐಷಾರಾಮಿ ಜೀವನ ನಡೆಸಲು ಈ ದಾರಿ ಹಿಡಿದಿದ್ದಾಗಿ ಹೇಳಿದ್ದಾರೆ, ಡಿಫೆನ್ಸ್ ಕಾಲೋನಿ ಮತ್ತು ಕೈಲಾಸ್ ಪೊಲೀಸ್ ಸ್ಟೇಷನ್ ಗಳಲ್ಲಿ ದೂರು ದಾಖಲಾಗಿದೆ,
ಗೋವಾದಲ್ಲಿ ನಡೆದ ಪ್ರಕರಣದಲ್ಲಿ ಅನುರಾಧವೊಂದರಲ್ಲಿ ಜಾಮೀನು ಪಡೆದು ಹೊರ ಬಂದಿದ್ದಳು, ಕ್ಯಾಸಿನೋ ಏಜೆಂಟ್ ಕೊಲೆ ಪ್ರಕರಣದಲ್ಲಿ ದೆಹಲಿ ಮಹಿಳೆಯನ್ನು ಬಂಧಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!