ದೇಶ

ಜಾಗತಿಕ ಮಟ್ಟದಲ್ಲಿ ಸಕಾಲಕ್ಕೆ ಬರುವ ವಿಮಾನಗಳ ಪಟ್ಟಿ: ಭಾರತದ ಇಂಡಿಗೋ, ಏರ್ ಏಷ್ಯಾಗೆ ಸ್ಥಾನ!

Srinivas Rao BV
ನವದೆಹಲಿ: ಜಾಗತಿಕ ಮಟ್ಟದಲ್ಲಿ ಸಕಾಲಕ್ಕೆ ಬರುವ ವಿಮಾನಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ವೈಮಾನಿಕ ಸಂಸ್ಥೆಗಳಾದ ಇಂಡಿಗೋ ಹಾಗೂ ಏರ್ ಏಷ್ಯಾ ಸಂಸ್ಥೆಗಳೂ ಸಹ ಸ್ಥಾನ ಪಡೆದಿವೆ. 
ದೆಹಲಿ, ಹೈದರಾಬಾದ್, ಬೆಂಗಳೂರು, ಭುವನೇಶ್ವರ್ ವಿಮಾನ ನಿಲ್ದಾಣಗಳು ಸಮಯಕ್ಕೆ ಸರಿಯಾಗಿ ವಿಮಾನಗಳು ಬರುವ, ಹೊರಡುವ ಜಗತ್ತಿನ ಟಾಪ್  20 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿವೆ. 
ಬ್ರಿಟನ್ ನ ಮೂಲದ ಒಎಜಿ ಪಂಕ್ಚ್ಯುಯಾಲಿಟಿ ಲೀಗ್ ಎಂಬ ವೈಮಾನಿಕ ಪ್ರಯಾಣ ಗುಪ್ತಚರ ಇಲಾಖೆ 2018 ರಲ್ಲಿ 58 ಮಿಲಿಯನ್ ವಿಮಾನ ದಾಖಲೆಗಳನ್ನು ವಿಶ್ಲೇಷಿಸಿದ್ದು, ನಿಗದಿತ ಸಮಯಕ್ಕೆ ಸರಿಯಾಗಿ ತಲುಪುವ ವಿಮಾನಗಳ ಟಾಪ್ ಶ್ರೇಣಿಗಳನ್ನು ಪಟ್ಟಿ ಮಾಡಿದೆ. 
ವಿಮಾನಗಳ ಆನ್ ಟೈಮ್ ಪರ್ಫಾರ್ಮೆನ್ಸ್ (ಒಟಿಪಿ)ಗೆ ನಿಗದಿತ ಸಮಯಕ್ಕಿಂತ 15 ನಿಮಿಷಗಳ ತಡವಾಗಿ ಲ್ಯಾಂಡಿಂಗ್, ಟೇಕ್ ಆಫ್ ಮಾಡುವ ವಿಮಾನಗಳನ್ನು ಪರಿಗಣಿಸಲಾಗುತ್ತದೆ. 
ಭಾರತದ ಇಂಡಿಗೋ ವಿಮಾನ ಮೆಘಾ ಏರ್ ಲೈನ್ಸ್ ಲಿಸ್ಟ್ ನಲ್ಲಿ ನಂ.7 ನೇ ಸ್ಥಾನದಲ್ಲಿದ್ದು, ಏಷ್ಯಾದಲ್ಲಿ ಪೆಸಿಫಿಕ್ ಪ್ರದೇಶದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಲ್ಯಾಂಡಿಂಗ್, ಟೇಕ್ ಆಫ್ ಆಗುವ ವಿಮಾನಗಳ ಪಟ್ಟಿಯಲ್ಲಿ 10 ನೇ ಸ್ಥಾನ ಪಡೆದಿದ್ದರೆ, ಏರ್ ಏಷ್ಯಾ 12 ನೇ ಸ್ಥಾನದಲ್ಲಿದೆ. 
SCROLL FOR NEXT