ಕರಾಚಿ: ಪಾಕಿಸ್ತಾನವನ್ನು ವಿಶ್ವಸಮುದಾಯದಲ್ಲಿ ಏಕಾಂಗಿಯಾಗುವಂತೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ಮಾತು ಅಕ್ಷರಶಃ ಸತ್ಯವಾಗಿದೆ ಎನಿಸುತ್ತಿದೆ. ಏಕೆಂದರೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅನುದಾನಕ್ಕಾಗಿ ಪ್ರಪಂಚದ ಮುಂದೆ ಬೇಡುತ್ತಿದ್ದಾರಂತೆ.
ಸ್ವತಃ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಗಳೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನ ದಿವಾಳಿಯಾಗಿದ್ದು, ಸಾಲ ವಾಪಸ್ ಕೊಡುವುದಕ್ಕೆ ಐಎಂಎಫ್ ನಿಂದ 8 ಬಿಲಿಯನ್ ಅಮೆರಿಕನ್ ಡಾಲರ್ ಸಹಾಯ ಕೇಳುತ್ತಿದೆ. ಈ ಬಗ್ಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಿಂಧ್ ನ ಮುಖ್ಯಮಂತ್ರಿ ಮೌರನ್ ಅಲಿ ಶಾ ಮಾತನಾಡಿದ್ದು, ಅನುದಾನ ತರಲು ವಿದೇಶಗಳಿಗೆ ಇಮ್ರಾನ್ ಖಾನ್ ಭೇಟಿ ನೀಡುತ್ತಿದ್ದು, ಜಗತ್ತಿನ ಮುಂದೆ ಬೇಡುತ್ತಿದ್ದಾರೆ ಎಂದು ಹೇಳಿದ್ದಾರೆ.