ವಸುಂಧರಾ ರಾಜೆ 
ದೇಶ

ವಸುಂಧರಾ ರಾಜೆ ಸರ್ಕಾರ "ಅನುಪಯುಕ್ತ ವಿಷಯಗಳ" ಮೇಲೆ ಗಮನ ಕೇಂದ್ರೀಕರಿಸಿತ್ತು: ರಾಜಸ್ಥಾನ ರಾಜ್ಯಪಾಲ

ಈ ಹಿಂದಿನ ಬಿಜೆಪಿ ಸರ್ಕಾರ ಅದಕ್ಕೆ ಹಿಂದಿದ್ದ ಕಾಂಗ್ರೆಸ್ ಸರ್ಕಾರದ ಹುಳುಕುಗಳನ್ನು ಹುಡುಕುವುದರಲ್ಲೇ ಸಮಯ ಕಳೆದಿದೆ ಎಂದು ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಆರೋಪಿಸಿದ್ದಾರೆ.

ಜೈಪುರ: ಈ ಹಿಂದಿನ ಬಿಜೆಪಿ ಸರ್ಕಾರ  ಅದಕ್ಕೆ ಹಿಂದಿದ್ದ ಕಾಂಗ್ರೆಸ್ ಸರ್ಕಾರದ ಹುಳುಕುಗಳನ್ನು ಹುಡುಕುವುದರಲ್ಲೇ ಸಮಯ ಕಳೆದಿದೆ ಎಂದು ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್  ಆರೋಪಿಸಿದ್ದಾರೆ. ನೂತನ ವಿಧಾನಸಭೆ ಸದಸ್ಯರನ್ನುದ್ದೇಶಿಸಿ ಅಧಿವೇಶನದಲ್ಲಿ ಮಾತನಾಡಿದ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ರಚನೆಯಾಗಿರುವ ಕಾಂಗ್ರೆಸ್ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನುದ್ದೇಶಿಸಿ ಮಾತನಾಡಿದರಾಜ್ಯಪಾಲ ವಸುಂಧರಾ ರಾಜೇ ಸರಕಾರದ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ದರ ಕುಸಿದಿದೆ ಎಂದು ಹೇಳಿದರು.
"ಹಿಂದಿನ ಸರ್ಕಾರದ ದೋಷಗಗಳನ್ನು ಹುಡುಕುತ್ತಲೇ ಅನುಪಯುಕ್ತ ವಿಚಾರಗಳ ಬಗ್ಗೆಯೇ ಈ ಹಿಂದಿನ ಸರ್ಕಾರ ಸಾಕಷ್ಟು ಗಮನ ಹರಿಸುವ ಮೂಲಕ ಸಮಯ ಹಾಳು ಮಾಡಿದೆ. ಈ ಪರಿಣಾಮ ರಾಜ್ಯದ ಆರ್ಥಿಕ ಪ್ರಗತಿಯ ದರ 2009-10ರಲ್ಲಿ ಶೇ  8. 16 ಇದ್ದದ್ದು 2014-15 ಹಾಗೂ 2017-18ರಲ್ಲಿ ಶೇ.  7.19 ಗೆ ಕುಸಿದಿದೆ" ಕಲ್ಯಾಣ್ ಸಿಂಗ್ ಹೇಳಿದ್ದಾರೆ.
2009-10 ರಿಂದ 2013-14ರವರೆಗೆ ತಲಾ ಆದಾಯದ ಸರಾಸರಿ ಏರಿಕೆ 14.95 ಶೇ. ಆಗಿದ್ದದ್ದು 2014-15ರ, 2017-18ರ ಅವಧಿಯಲ್ಲಿ 9.68 ಶೇ .ಗೆ ಇಳಿಕೆಯಾಗಿದೆಅದೇ ರೀತಿ, 2008-09ರಲ್ಲಿ ಕೃಷಿ ವಲಯದಲ್ಲಿ   ಶೇ.8.94 ರಷ್ಟು ಬೆಳವಣಿಗೆ ದರ ದಾಖಲಾಗಿತ್ತು. ಇದೀಗ 2013-14ನೇ ಸಾಲಿನಲ್ಲಿ ಶೇ.4.19 ಕ್ಕೆ ಕಡಿಮೆಯಾಗಿದೆ. 2017-18ರ ಅವಧಿಯಲ್ಲಿ ಇದು ಶೇ 3.95 ಕ್ಕೆ ಇಳಿದಿದೆ. ಇದಕ್ಕೆ ವಸುಧರಾ ರಾಜೆ ಅವರ ಸರ್ಕಾರದ ತಪ್ಪು ನೀತಿಗಳೇ ಕಾರಣ ಎಂದು ಅವರು ದೂರಿದ್ದಾರೆ.
ರಾಜ್ಯಪಾಲರ ಭಾಷಣ ಹಾಗೂ ಆರೋಪಗಳ ಕುರಿತು ಇದೀಗ ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ತಕ್ಷಣಕ್ಕೆ ಯಾವ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!