ದೇಶ

ಲೋಕಾಪಾಲ ನೇಮಕಕ್ಕೆ ಆಗ್ರಹಿಸಿ ಜ.30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

Nagaraja AB

ಮುಂಬೈ:  ಕೇಂದ್ರದಲ್ಲಿ ಲೋಕಾಪಾಲ ನೇಮಕಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ  ಕಾರ್ಯಕರ್ತ ಅಣ್ಣಾ ಹಜಾರೆ  ಜನವರಿ 30 ರಿಂದ ಮಹಾರಾಷ್ಟ್ರದ ರಾಲೆಗಣ್ ಸಿದ್ಧಿಯಲ್ಲಿ  ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.

ಲೋಕಾಯುಕ್ತ  ಮತ್ತು ಲೋಕಾಯುಕ್ತ ಕಾಯ್ದೆ 2013 ಪ್ರಕಾರ ಭ್ರಷ್ಟಾಚಾರ ನಿಗ್ರಹ  ಒಂಬುಡ್ಸ್ ಮನ್ ಮತ್ತು ಲೋಕಾಪಾಲ ನೇಮಕಕ್ಕೆ   ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ.  ದೇಶವನ್ನು ಸರ್ವಾಧಿಕಾರತ್ವ ಆಡಳಿತಕ್ಕೆ  ಒಳಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಗುಡುಗಿದ್ದಾರೆ.

2013ರಲ್ಲಿ ಲೋಕಾಯುಕ್ತ ಮತ್ತು ಲೋಕಾಪಾಲ್  ಕಾಯ್ದೆ ಮಾಡಲಾಗಿತ್ತು. ಆ ಬಳಿಕ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಅವರು ಐದು ವರ್ಷಗಳಲ್ಲಿ ಏನನ್ನೂ ಮಾಡಿಲ್ಲ,  ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ 32 ಪತ್ರಗಳನ್ನು ಬರೆದಿದ್ದೆ. ಆದರೆ,  ಪ್ರಧಾನಿ ಲೋಕ್ ಪಾಲ್ ಕುರಿತಾಗಿನ ಯಾವುದೇ ಆಶ್ವಾಸನೆಗಳನ್ನು ಈಡೇರಿಸಲಿಲ್ಲ ಎಂದು ಹಜಾರೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಲೋಕಪಾಲ ನೇಮಕ ಕುರಿತಾಗಿ ಸಮಿತಿ ಸಭೆ ಜನವರಿ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸಮಿತಿಯಲ್ಲಿ  ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ಇದ್ದಾರೆ.

SCROLL FOR NEXT