ಕೊಹ್ಲಿ ಹೇಳಿದ ರೆಕಾರ್ಡ್, ರೋಜರ್ ಫೆಡರರ್, ರೊಮ್ಯಾಂಟಿಕ್ ಗೇಟ್ ವೇ ಕಥೆ 
ದೇಶ

ಕೊಹ್ಲಿ ಹೇಳಿದ ರೆಕಾರ್ಡ್, ರೋಜರ್ ಫೆಡರರ್, ರೊಮ್ಯಾಂಟಿಕ್ ಗೇಟ್ ವೇ ಕಥೆ

ವಿದೇಶಿ ನೆಲದಲ್ಲಿ ಟೂರ್ನಿ ನಡೆಯುವಾಗ ಆಟಗಾರರ ಪತ್ನಿಯರು ಸರಣಿ ಮುಕ್ತಾಯಗೊಳ್ಳುವವರೆಗೂ ಅಲ್ಲೇ ಇರುವುದಕ್ಕೆ ಅನುಮತಿ ನೀಡಬೇಕೆಂದು ಕೊಹ್ಲಿ ಈ ಹಿಂದೆ ಪಟ್ಟು ಹಿಡಿದಿದ್ದರು.

ಮೌಂಟ್ ಮಂಗೂನ್ಯು: ವಿದೇಶಿ ನೆಲದಲ್ಲಿ ಟೂರ್ನಿ ನಡೆಯುವಾಗ ಆಟಗಾರರ ಪತ್ನಿಯರು ಸರಣಿ ಮುಕ್ತಾಯಗೊಳ್ಳುವವರೆಗೂ ಅಲ್ಲೇ ಇರುವುದಕ್ಕೆ ಅನುಮತಿ ನೀಡಬೇಕೆಂದು ಕೊಹ್ಲಿ ಈ ಹಿಂದೆ ಪಟ್ಟು ಹಿಡಿದಿದ್ದರು.  ಈಗ ಸರಣಿ ಮಧ್ಯೆ ಸಮಯ ಸಿಕ್ಕಾಗ ತಮ್ಮ ದಿನಚರಿ ಹೇಗಿರುತ್ತದೆ ಎಂಬುದನ್ನು ಸ್ವತಃ ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ. 
ಸಧ್ಯಕ್ಕೆ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗಾಗಿ ನ್ಯೂಜಿಲ್ಯಾಂಡ್ ನಲ್ಲಿರುವ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಮಧುರ ಕ್ಷಣಗಳನ್ನು ಕಳೆಯುತ್ತಿದ್ದಾರೆ.  ಬಿಡುವಿನ ಸಮಯದಲ್ಲಿ ಟೆನ್ನಿಸ್​ ದಿಗ್ಗಜ ರೋಜರ್​ ಫೆಡರರ್​ ನ್ನೂ ಭೇಟಿ ಮಾಡಿದ್ದಾರೆ.  ಈ ಎಲ್ಲವನ್ನೂ ಕೊಹ್ಲಿ ಸ್ಕೈ ಸ್ಪೋರ್ಟ್ಸ್ ಜೊತೆಗೆ ಹಂಚಿಕೊಂಡಿದ್ದು, ಬಿಸಿಸಿಐ ಸಂದರ್ಶನವನ್ನು ಪ್ರಕಟಿಸಿದೆ. 
ನ್ಯೂಜಿಲ್ಯಾಂಡ್ ನಂತಹ ಅದ್ಭುತ ಪ್ರದೇಶದಲ್ಲಿ ನನ್ನ ಪತ್ನಿಯೊಂದಿಗೆ ವಾಕಿಂಗ್ ಹೋಗಲು ಇಷ್ಟಪಡುತ್ತೇನೆ, ಪೂರ್ಣ ಚಂದ್ರನ ಬೆಳದಿಂಗಳನ್ನು ಸವಿಯಲು ಇಷ್ಟಪಡುತ್ತೇನೆ ಎಂದು ಕೊಹ್ಲಿ ಸ್ಕೈ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 
ಬಹುತೇಕ ಸಂದರ್ಭಗಳಲ್ಲಿ, ಇಬ್ಬರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅನುಯಾಯಿಗಳಿರುವುದರಿಂದ ನಮಗೆ ಸಿಗುವ ಕಡಿಮೆ ಸಮಯವನ್ನೂ ಆನಂದಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ನಮ್ಮನ್ನು ಹೆಚ್ಚು ಗುರುತಿಸದೇ ಇರುವ ಪ್ರದೇಶಗಳಲ್ಲಿ ಪತ್ನಿಯೊಂದಿಗೆ ಮಾತನಾಡುತ್ತಾ ಸುದೀರ್ಘವಾದ ವಾಕ್ ಹೋಗುವುದಕ್ಕೆ ಇಷ್ಟಪಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಇದೇ ವೇಳೆ ಕೊಹ್ಲಿ ಟೆನ್ನಿಸ್​ ದಿಗ್ಗಜ ರೋಜರ್​ ಫೆಡರರ್​ ನ್ನೂ ಭೇಟಿ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ತನ್ನನ್ನು ಭೇಟಿ ಮಾಡಿದ್ದನ್ನು  ರೋಜರ್​ ಫೆಡರರ್​ ಸಹ ನೆನಪಿಸಿಕೊಂಡರು ಎಂದು ಕೊಹ್ಲಿ ಹೇಳಿದ್ದಾರೆ, 
ಕೆಲವು ವರ್ಷಗಳ ಹಿಂದೆ ರೋಜರ್ ಫೆಡರರ್ ನ್ನು ಭೇಟಿ ಮಾಡಿದ್ದೆ. ಅದನ್ನು ಅವರು ಈಗಲೂ ನೆನಪಿನಲ್ಲಿಟ್ಟುಕೊಂಡಿದ್ದಾರೆ, ಆ ಅನುಭೂತಿಯನ್ನು ನಾನು ವರ್ಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!