ಸೌಜನ್ಯದ ಭೇಟಿಯನ್ನು ರಾಜಕೀಯಕ್ಕಾಗಿ ಬಳಸಿಕೊಂಡ್ರಿ: ರಾಹುಲ್ ಗೆ ಮನನೊಂದು ಪತ್ರ ಬರೆದ ಮನೋಹರ್ ಪರಿಕ್ಕರ್ 
ದೇಶ

ಸೌಜನ್ಯದ ಭೇಟಿಯನ್ನು ರಾಜಕೀಯಕ್ಕಾಗಿ ಬಳಸಿಕೊಂಡ್ರಿ: ರಾಹುಲ್ ಗೆ ಮನನೊಂದು ಪತ್ರ ಬರೆದ ಮನೋಹರ್ ಪರಿಕ್ಕರ್

ರಾಫೆಲ್ ಹಗರಣದ ಕುರಿತು ಪರಿಕ್ಕರ್ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿದ್ದರು.

ನವದೆಹಲಿ: ರಾಫೆಲ್ ಹಗರಣದ ಕುರಿತು ಪರಿಕ್ಕರ್ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿದ್ದರು. ಇದೊಂದು ಸೌಜನ್ಯದ ಭೇಟಿ ಎಂದು ಹೇಳಲಾಗಿದ್ದರೂ ಟ್ವೀಟ್ ಬೆನ್ನಲ್ಲೇ ಪರಿಕ್ಕರ್ ಅವರನ್ನು ಭೇಟಿ ಮಾಡಿದ್ದು ದೇಶದ ಗಮನ ಸೆಳೆದಿತ್ತು. ಈಗ ಪರಿಕ್ಕರ್ ಸೌಜನ್ಯದ ಭೇಟಿಯನ್ನು ರಾಜಕೀಯಕ್ಕಾಗಿ ಬಳಸಿಕೊಂಡ ರಾಹುಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ರಾಹುಲ್ ಗಾಂಧಿ-ತಮ್ಮ ಭೇಟಿಯ ಬಗ್ಗೆ ಪತ್ರದ ಮೂಲಕ ಸ್ಪಷ್ಟನೆ ನೀಡಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ನೀವು ಸೌಜನ್ಯಕ್ಕಾಗಿ ಭೇಟಿ ನೀಡಿದ್ದನ್ನು ರಾಜಕೀಯ ಅವಕಾಶಕ್ಕಾಗಿ ಬಳಸಿಕೊಂಡಿರುವುದು ಬೇಸರ ಉಂಟುಮಾಡಿದೆ. 5 ನಿಮಿಷಗಳ ಕಾಲ ನಿಮ್ಮ ಭೇಟಿ ವೇಳೆ ರಾಫೆಲ್ ಒಪ್ಪಂದದ ಬಗ್ಗೆ ನಾವು ಮಾತನಾಡಿಯೇ ಇಲ್ಲ ಎಂದು ಮನೋಹರ್ ಪರಿಕ್ಕರ್ ತೀಕ್ಷ್ಣವಾಗಿ ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 
ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳಲ್ಲಿ ನವೆದೆಹಲಿಯಲ್ಲಿ ಪಕ್ಷದ ಬೂತ್ ಮಟ್ಟದ  ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಸ್ನೇಹಿತರೇ, ಅಂಬಾನಿಗೆ ಲಾಭ ಮಾಡಿಕೊಡುವುದಕ್ಕೆ ಮೋದಿ ಏರ್ಪಡಿಸಿದ ಹೊಸ ರಾಫೆಲ್ ಒಪ್ಪಂದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು  ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದಿದ್ದರು.  ಈ ಬೆನ್ನಲ್ಲೇ ಮನೋಹರ್ ಪರಿಕ್ಕರ್ ಪತ್ರ ಬರೆದು ರಾಹುಲ್ ಗಾಂಧಿ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್