ದೇಶ

ಕಳೆದ 3 ವರ್ಷಗಳಲ್ಲಿ ಕಾಶ್ಮೀರಕ್ಕೆ ಸುಮಾರು 400 ಉಗ್ರರು ನುಸುಳಿ ಬಂದಿದ್ದಾರೆ: ಕೇಂದ್ರ

Lingaraj Badiger
ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಸುಮಾರು 400 ಉಗ್ರರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿ ಬಂದಿದ್ದಾರೆ. ಈ ಪೈಕಿ 126 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರು ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.
ಗಡಿ ನುಸುಳಿಬಂದ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ 27 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇದುವರೆಗೆ ನಾಲ್ಕು ಉಗ್ರರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಅತಿ ಹೆಚ್ಚು ಉಗ್ರರು ಗಡಿ ನುಸುಳಿದ್ದು, ಇದು ಕಣಿವೆ ರಾಜ್ಯದಲ್ಲಿನ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ರೆಡ್ಡಿ ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದರು.
2018ರಲ್ಲಿ 143 ಉಗ್ರರು, 2017ರಲ್ಲಿ 136, 2016ರಲ್ಲಿ 119 ಉಗ್ರರು ಗಡಿ ನುಸುಳಿದ್ದಾರೆ ಎಂದು ಸಚಿವರು ತಿಳಿಸಿದರು.
SCROLL FOR NEXT