ನರೇಂದ್ರ ಮೋದಿ-ಬೇರ್ ಗ್ರಿಲ್ಸ್ 
ದೇಶ

ಮ್ಯಾನ್ ವರ್ಸಸ್ ವೈಲ್ಡ್: ಕಾಡಿನಲ್ಲಿ ಅಲೆದಾಟದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ವೈಲ್ಡ್ ಲೈಫ್ ಸರ್ವೈವರ್ ಬೇರ್ ಗ್ರಿಲ್ಸ್ ಜೊತೆ ದಟ್ಟಾರಣ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಂಡಿರುವುದು ಸದ್ಯ ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ನವದೆಹಲಿ: ವೈಲ್ಡ್ ಲೈಫ್ ಸರ್ವೈವರ್ ಬೇರ್ ಗ್ರಿಲ್ಸ್ ಜೊತೆ ದಟ್ಟಾರಣ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಂಡಿರುವುದು ಸದ್ಯ ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಈ ವಿಡಿಯೋ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ನೀವು ಹಚ್ಚ ಹಸಿರಿನ ಕಾಡುಗಳು, ವೈವಿಧ್ಯಮಯ ವನ್ಯಜೀವಿಗಳು, ಸುಂದರವಾದ ಪರ್ವತಗಳು ಮತ್ತು ಪ್ರಬಲ ನದಿಗಳನ್ನು ಕಾಣುತ್ತೀರಿ. ಈ ಕಾರ್ಯಕ್ರಮವನ್ನು ವೀಕ್ಷಿಸಿದ ಬಳಿಕ ನಿಮಗೆ, ಭಾರತದ ವಿವಿಧ ಭಾಗಗಳಿಗೆ ಭೇಟಿ ನೀಡುವ ಮನಸ್ಸಾಗಲಿದೆ. ಹಾಗೇ ಪರಿಸರ ಸಂರಕ್ಷಣೆಯ ಕಡೆಗೂ ಗಮನ ಹರಿಯಲಿದೆ ಎಂದು ಬರೆದುಕೊಂಡಿದ್ದಾರೆ.
ಡಿಸ್ಕವರಿ ಚಾನೆಲ್ ನಲ್ಲಿ ಬೇರ್ ಗ್ರಿಲ್ಸ್ ಸಾಹಸದ ವಿಡಿಯೋಗಳು ಬಿತ್ತರವಾಗುತ್ತವೆ. ಇನ್ನು ಬೇರ್ ಗ್ರಿಲ್ಸ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಸುತ್ತುತ್ತಿರುವ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಆಗಸ್ಟ್ 12ರಂದು ರಾತ್ರಿ 9 ಗಂಟೆ ಸುಮಾರಿಗೆ ಈ ಕಾರ್ಯಕ್ರಮ ಬಿತ್ತರವಾಗಲಿದ್ದು ಅಂದು ಜಗತ್ತಿನ 180 ರಾಷ್ಟ್ರಗಳಿಗೆ ಮೋದಿ ಅವರ ಇನ್ನೊಂದು ಮುಖ ಗೊತ್ತಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT