ಸಂಸತ್ತಿನಲ್ಲಿ ಸಿದ್ದಾರ್ಥ್ ಸಾವಿನ ಪ್ರತಿಧ್ವನಿ: ತನಿಖೆಗೆ ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಆಗ್ರಹ 
ದೇಶ

ಸಂಸತ್ತಿನಲ್ಲಿ ಸಿದ್ದಾರ್ಥ್ ಸಾವಿನ ಪ್ರತಿಧ್ವನಿ: ತನಿಖೆಗೆ ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಆಗ್ರಹ

ಲೋಕಸಭೆಯಲ್ಲಿ ಬುಧವಾರ ಕರ್ನಾಟಕದ ಪ್ರಖ್ಯಾತ ಕೆಫೆ ಕಾಫಿ ಡೇ ಮಾಲೀಕ ವಿ ಜಿ ಸಿದ್ಧಾರ್ಥ್ ಅಕಾಲಿಕ ಮರಣದ ವಿಚಾರವನ್ನು ಕಾಂಗ್ರೆಸ್ ಸದಸ್ಯ ಮನೀಷ್ ತಿವಾರಿ ಪ್ರಸ್ತಾಪಿಸಿದ್ದು....

ನವದೆಹಲಿ: ಲೋಕಸಭೆಯಲ್ಲಿ ಬುಧವಾರ ಕರ್ನಾಟಕದ ಪ್ರಖ್ಯಾತ ಕೆಫೆ ಕಾಫಿ ಡೇ ಮಾಲೀಕ ವಿ ಜಿ ಸಿದ್ಧಾರ್ಥ್ ಅಕಾಲಿಕ ಮರಣದ ವಿಚಾರವನ್ನು ಕಾಂಗ್ರೆಸ್ ಸದಸ್ಯ ಮನೀಷ್ ತಿವಾರಿ ಪ್ರಸ್ತಾಪಿಸಿದ್ದು, ಉದ್ಯಮಿಯ ಆತ್ಮಹತ್ಯೆ ಗೆ ಕಾರಣವಾದ ಸನ್ನಿವೇಶಗಳ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ
ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ತಿವಾರಿ, ಸಿದ್ಧಾರ್ಥ್ ಆತ್ಮಹತ್ಯೆಗೆ ತೆರಿಗೆ ಅಧಿಕಾರಿಗಳ ಕಿರುಕುಳವೂ ಕಾರಣವಿರಬಹುದು ಎಂಬ ಮಾತು ಕೇಳಿಬಂದಿದೆ ಹೀಗಾಗಿ ಇದು ಗಂಭೀರ ಹಾಗೂ ಸೂಕ್ಷ್ಮ ವಿಚಾರ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು
ಆದಾಗ್ಯೂ, ಸ್ಪೀಕರ್ ಓಂ ಬಿರ್ಲಾ ಅವರು ಆತ್ಮಹತ್ಯೆಗೂ ಎರಡು ದಿನ ಮೊದಲು ಸಿದ್ದಾರ್ಥ್ ಬರೆದಿಟ್ಟದ್ದರು ಎನ್ನಲಾದ ಪತ್ರದ ವಿಷಯಗಳನ್ನು ಉಲ್ಲೇಖಿಸಲು ಅನುಮತಿಸಲಿಲ್ಲ “ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸುವವರೆಗೆ ಪತ್ರ ಮತ್ತು ಅದರಲ್ಲಿರುವ ವಿಷಯಗಳನ್ನು ಸಂಗ್ರಹಿಸುವುದು ಅಥವಾ ಉಲ್ಲೇಖಿಸುವುದು ಸೂಕ್ತವೇ?” ಎಂದು ಪ್ರಶ್ನಿಸಿದರು.
ಆತ್ಮಹತ್ಯೆಯ ಕುರಿತು ತನಿಖೆ ನಡೆಯುವುದು ಖಚಿತ ಆದರೆ ಆದಾಯ ತೆರಿಗೆ ಇಲಾಖೆ ಮತ್ತು ಅಧಿಕಾರಿಗಳ ಕಿರುಕುಳದ ಕುರಿತು ಕೇಳಿಬರುತ್ತಿರುವ ವಿಚಾರವೂ ಗಂಭೀರವವಾದುದು ಎಂದು ತಿಳಿಸಿದರು.
ಖ್ಯಾತ ಉದ್ಯಮಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್, ಸೋಮವಾರ ರಾತ್ರಿ ಮಂಗಳೂರು ಸಮೀಪದ ನೇತ್ರಾವತಿ ಸೇತುವೆ ಮೇಲೆ ನಿಗೂಢವಾಗಿ ಕಾಣಿಯಾಗಿದ್ದರು. ಪೊಲೀಸರು, ನುರಿತ ಈಜುಗಾರರ ತಂಡ, ಮೀನುಗಾರರು ಸೇರಿದಂತೆ ಹಲವು ವಿಶೇಷ ತಂಡಗಳಿಂದ ಶೋಧ ಕಾರ್ಯ ನಡೆಸಲಾಗಿತ್ತು. ಸತತ 36 ಗಂಟೆಗಳ ಕಾಲ ನಡೆದ ಶೋಧದ ಬಳಿಕ ಬುಧವಾರ ಬೆಳಗ್ಗೆ 60:30ರಲ್ಲಿ ಹೊಯ್ಗೆ ವಜಾರ್‌ ಅಳಿವೆ ಬಳಿಯ ಹಿನ್ನೀರಿನಲ್ಲಿ ಸಿದ್ದಾರ್ಥ್ ಅವರ ಮೃತ ದೇಹ ಪತ್ತೆಯಾಗಿದೆ.
ಆದರೆ ಹಲವು ಸವಾಲುಗಳನ್ನು ಎದುರಿಸಿ ಕೆಫೆ ಕಾಫಿ ಡೇ ಸೇರಿದಂತೆ ವಿವಿಧ ಬಗೆಯ ಉದ್ಯಮಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗದಾತರಾಗಿದ್ದ ಸಿದ್ಧಾರ್ಥ್ ಆತ್ಮಹತ್ಯೆಗೆ ಖಚಿತ ಕಾರಣಗಳೇನು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; ಆ ದೃಶ್ಯಕ್ಕೆ ಆಕ್ಷೇಪ!

ಲೂಟಿಕೋರನ ಭಯವೇ? ಖರ್ಗೆಯವರೇ, ಭಿಕ್ಷೆ ಬೇಡುವ 'ದಯನೀಯ ಸ್ಥಿತಿ' ಬರಬಾರದಿತ್ತು! ಜೆಡಿಎಸ್ ಟಾಂಗ್

ಕುರ್ಚಿ ಕದನ: ಡಿಕೆಶಿ ಸಿಎಂ ಆಗುವುದು ಯಾವಾಗ?; ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

SCROLL FOR NEXT