ದೇಗುಲ ಪ್ರವೇಶಕ್ಕೆ ಯತ್ನಿಸಿದ ದಲಿತ ಬಾಲಕನಿಗೆ 'ಮೇಲ್ಜಾತಿ' ಗುಂಪಿನಿಂದ ಹಿಗ್ಗಾಮುಗ್ಗಾ ಥಳಿತ!
ಪಾಲಿ: ದೇವಾಲಯ ಪ್ರವೇಶಕ್ಕೆ ಯತ್ನಿಸಿದ ಅಪ್ರಾಪ್ತ ದಲಿತ ಬಾಲಕನನ್ನು ಮೇಲ್ಜಾತಿಯ ಜನರ ಗುಂಪೊಂದು ಥಳಿಸಿ ಹೊರಗೆ ದಬ್ಬಿರುವ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ತೋರಿಸುವಂತೆ ದೇವಾಲಯ ಪ್ರವೇಶವನ್ನು ತಡೆಯುವ ಸಲುವಾಗಿ ಬಾಲಕನನ್ನು ವ್ಯಕ್ತಿಯೊಬ್ಬ ಥಳಿಸುತ್ತಿದ್ದಾನೆ.ಪೋಲೀಸ್ ಅಧಿಕಾರಿಗಳು ಹೇಲಿರುವಂತೆ ಆ ಬಾಲಕನ ವಿರುದ್ಧ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ದಾಖಲಾಗಿದೆ. ಆ ಹಿನ್ನೆಲೆಯಲ್ಲಿ ಬಾಲಕನ ಮೇಲೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
"ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಆತನನ್ನು ಬಾಲಕರ ಆಶ್ರಯ ಮನೆಗೆ ಸ್ಥಳಾಂತರಿಸಲಾಗಿದೆ. ಇದಲ್ಲದೆ ವೀಡಿಯೋದಲ್ಲಿ ಗುರುತಿಸಲ್ಪಟ್ತ ಬಾಲಕನನ್ನು ಹೊಡೆಯುತ್ತಿರುವ ಗ್ರಾಮಸ್ಥರ ವಿರುದ್ಧ ಸಹ ಕ್ರಮ ಜರುಗಿಸಲಾಗುತ್ತದೆ" ಅಧಿಕಾರಿಗಳು ಹೇಳಿದ್ದಾರೆ.
ಪಾಲೆ ಜಿಲ್ಲೆ ಧನೇರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಬಾಲಕನನ್ನು ಗುಂಪೊಂದು ಥಳಿಸುವಾಗ ಅದನ್ನು ನೋಡಿದವರೊಬ್ಬರು ವೀಡಿಯೋ ಚಿತ್ರಿಸಿ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಜೂನ್ 1 ರಂದು ನಡೆದ ಘಟನೆ ವೀಡಿಯೋ ಜೂನ್ 3 ರಂದು ಆನ್ ಲೈನ್ ನಲ್ಲಿ ಹರಿದಾಡುತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.