ದೇಶ

ಜಮ್ಮುವಿನ ಅನಂತ್ ನಾಗ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ: ಓರ್ವ ಉಗ್ರ ಹತ

Sumana Upadhyaya
ಜಮ್ಮು: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ವೆರಿನಾಗ್ ಎಂಬಲ್ಲಿ ಶನಿವಾರ ನಸುಕಿನ ಜಾವ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.
ಎಂದಿನಂತೆ ಭದ್ರತಾ ಪಡೆ ಯೋಧರು ಶೋಧ ಕಾರ್ಯ ಆರಂಭಿಸಿದಾಗ ಇದ್ದಕ್ಕಿದ್ದಂತೆ ಅವಿತು ಕುಳಿತಿದ್ದ ಉಗ್ರರು ಯೋಧರತ್ತ ಗುಂಡಿನ ಮಳೆಗೈಯಲಾರಂಭಿಸಿದರು. ಇನ್ನಷ್ಟು ಉಗ್ರರು ಅವಿತಿರುವ ಸಾಧ್ಯತೆಯಿದ್ದು ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
SCROLL FOR NEXT