ದೇಶ

ಸದನದಲ್ಲಿ ಸಂಖ್ಯೆಯ ಬಗ್ಗೆ ಯೋಚಿಸಬೇಡಿ, ಸಕ್ರಿಯವಾಗಿ ಭಾಗವಹಿಸಿ: ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ

Sumana Upadhyaya
ನವದೆಹಲಿ: ಸಂಸತ್ತಿನಲ್ಲಿ ಸಕ್ರಿಯ ವಿರೋಧ ಪಕ್ಷದ ಅಗತ್ಯತೆಯನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿರೋಧ ಪಕ್ಷಗಳು ತಮ್ಮ ಸಂಖ್ಯೆಯ ಬಲದ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದರು.
ಪ್ರತಿಪಕ್ಷ ಸದನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿರುವುದು ಮುಖ್ಯ. ವಿರೋಧಪಕ್ಷಗಳು ತಮ್ಮ ಸಂಖ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯತೆಯಿಲ್ಲ. ಸದನ ಕಲಾಪ ವೇಳೆ ವಿರೋಧ ಪಕ್ಷಗಳು ಸಕ್ರಿಯವಾಗಿ ಭಾಗವಹಿಸುತ್ತವೆ ಎಂದು ನಾನು ಆಶಿಸುತ್ತೇನೆ ಎಂದು ಮೋದಿ ಹೇಳಿದರು.
ಇಂದು 17ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲಿದ್ದು ಹಲವು ದಶಕಗಳ ನಂತರ ಈ ಬಾರಿ ಪೂರ್ಣ ಬಹುಮತದ ಸರ್ಕಾರ ಅಧಿಕಾರಕ್ಕೆ ಬಂದಿದೆ. ದೇಶಸೇವೆ ಮಾಡಲು ಜನರು ನಮಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ಎಲ್ಲಾ ಪಕ್ಷಗಳು ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿ ದೇಶದ ಜನತೆಯ ಪರವಾಗಿ ಕೆಲಸ ಮಾಡಬೇಕೆಂದು ನಾನು ಮನವಿ ಮಾಡುತ್ತೇನೆ ಎಂದರು.
ಈ ಬಾರಿ ಎನ್ ಡಿಎ ಮೈತ್ರಿಕೂಟ 353 ಲೋಕಸಭೆ ಸೀಟುಗಳನ್ನು ಗೆದ್ದುಕೊಂಡಿದ್ದು ಅದರಲ್ಲಿ ಬಿಜೆಪಿ 303 ಸ್ಥಾನಗಳಲ್ಲಿ ಜಯ ಗಳಿಸಿದೆ. ಸಂಸತ್ತಿನ ಮೊದಲ ಅಧಿವೇಶನ ಇಂದಿನಿಂದ ಜುಲೈ 26ರವರೆಗೆ ನಡೆಯಲಿದ್ದು ಜುಲೈ 5ರಂದು ಬಜೆಟ್ ಮಂಡನೆಯಾಗಲಿದೆ.
SCROLL FOR NEXT