ಪಂಜಾಬ್: ಬಿಎಸ್ ಎಫ್ ನಿಂದ ಶಂಕಿತ ಪಾಕ್ ಗೂಢಚಾರನ ಬಂಧನ
ಅಮೃತಸರ್(ಪಂಜಾಬ್): ಪಾಕಿಸ್ತಾನದ ಗೂಢಚಾರನೊಬ್ಬನನ್ನು ಪಂಜಾಬ್ ಗಡಿ ಭಾಗದಲ್ಲಿ ಬಿಎಸ್ ಎಫ್ ಯೋಧರು ಬಂಧಿಸಿದ್ದಾರೆ. ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಇರುವಾಗಲೇ ಈ ಬಂಧನವಾಗಿರುವುದು ಗಮನಾರ್ಹ ಸಂಗತಿ. ಪಂಜಾಬ್ ಫಿರೋಜ್ ಪುರದಲ್ಲಿ ಬಿಎಸ್ ಎಫ್ ಯೋಧರು ಪಾಕ್ ಗೂಢಚಾರನನ್ನು ಬಂಧಿಸಿದೆ
ಬಂಧಿತನನ್ನು ಮೊಹಮ್ಮದ್ ಶಾರುಖ್(21) ಎಂದು ಗುರುತಿಸಲಾಗಿದ್ದು ಈತ ಪಾಕಿಸ್ತಾನದ ಮೊರಾದಾಬಾದ್ ಗೆ ಸೇರಿದವನು ಎನ್ನಲಾಗಿದೆ.
ಬಂಧಿತನ ಬಳಿಯಿದ್ದ ಮೊಬೈಲ್ ಅನ್ನು ಬಿಎಸ್ ಎಫ್ ವಶಕ್ಕೆ ಪಡೆದಿದ್ದು ಇದರಲ್ಲಿ ಆತ ಫಾಕಿಸ್ತಾನದ ಆರಕ್ಕೂ ಹೆಚ್ಚು ಶಂಕಿತ ವಾಟ್ಸ್ ಅಪ್ ಗ್ರೂಪ್ ನಲ್ಲಿ ಸಕ್ರಿಯನಾಗಿರುವುದು ತಿಳಿದುಬಂದಿದೆ.
ಗಡಿಭಾಗದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ಈತನನ್ನು ಬಂಧಿಸಿದ್ದಾಗಿ ಬಿಎಸ್ ಎಫ್ ಹೇಳಿದೆ.