ಸಂಗ್ರಹ ಚಿತ್ರ 
ದೇಶ

ಪ್ರಧಾನಿ ರೇಸ್‍ನಲ್ಲಿ ನಾನಿಲ್ಲ, ಮತ್ತೆ ಮೋದಿಗೆ ಪಟ್ಟ: ಗಡ್ಕರಿ

ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಗಳ ರೇಸ್‍ನಲ್ಲಿ ಇಲ್ಲ, ದೇಶದ ಪ್ರಧಾನಿಯಾಗಿ ಮತ್ತೆ ನರೇಂದ್ರ ಮೋದಿಯವರೇ ಆಯ್ಕೆಯಾಗುತ್ತಾರೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ

ನವದೆಹಲಿ: ಬಿಜೆಪಿಯಲ್ಲಿ  ಪ್ರಧಾನಿ ಮೋದಿಗೆ ಪರ್ಯಾಯ ಶಕ್ತಿಯಾಗಿ ರೂಪುಗೊಳ್ಳಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ  ಸಚಿವ ನಿತಿನ್ ಗಡ್ಕರಿ ಪ್ರಯತ್ನಿಸುತ್ತಿದ್ದಾರೆ ಎಂಬಂತಹ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತಿತ್ತು.

ಮಧ್ಯಪ್ರದೇಶ, ರಾಜಸ್ತಾನ, ಹಾಗೂ ಛತ್ತೀಸ್ ಗಡ ಚುನಾವಣೆ ಫಲಿತಾಂಶದ ಬಳಿಕ ಗಡ್ಕರಿ ನೀಡಿದ ಹೇಳಿಕೆಗಳು ಕೂಡಾ ಇದಕ್ಕೆ ಇಂಬು ನೀಡುವಂತಿದೆ ಎನ್ನಲಾಗುತಿತ್ತು. ಆದರೆ, ತಾವು ಪ್ರಧಾನಿ ರೇಸ್ ನಲ್ಲಿ ಇಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ತಾವು ಪ್ರಧಾನಿ   ಹುದ್ದೆಯ ಆಕಾಂಕ್ಷಿಗಳ ರೇಸ್‍ನಲ್ಲಿ ಇಲ್ಲ,  ದೇಶದ  ಪ್ರಧಾನಿಯಾಗಿ ಮತ್ತೆ ನರೇಂದ್ರ ಮೋದಿಯವರೇ ಆಯ್ಕೆಯಾಗುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.“ಪ್ರಧಾನಿಯಾಗುವ ಕನಸು ನನಗಿಲ್ಲ. ದೇಶವು   ಮೋದಿಯವರ ನಾಯಕತ್ವದಲ್ಲಿ ಸಮರ್ಥವಾಗಿದ್ದು, ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ” ಎಂದು  ಇಂಡಿಯನ್ ಟುಡೇ ಆಯೋಜಿಸಿದ್ದ ಸಭೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಹುದ್ದೆಯ ರೇಸ್‍ ಎಂಬ ಸುದ್ದಿ  ಎಲ್ಲಿಂದ ಆರಂಭವಾಯಿತೋ ತಿಳಿದಿಲ್ಲ.  ಆದರೆ ನಾವೆಲ್ಲ ನರೇಂದ್ರ ಮೋದಿಯವರ ಬೆಂಬಲಕ್ಕಿದ್ದೇವೆ. ಆರ್ ಎಸ್‍ಎಸ್‍ನ ಕಟ್ಟಾ ಸೇವಕನಾಗಿ ಅವರು ಕನಸುಗಳನ್ನು ಸಾಕಾರಕ್ಕೆ ತರಲು  ಕೈಜೋಡಿಸುತ್ತೇನೆ” ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!