ದೇಶ

12 ವರ್ಷದ ಬಾಲಕನಿಂದ ನಿರಂತರ ಅತ್ಯಾಚಾರ: 10 ವರ್ಷದ ಬಾಲಕಿ ಗರ್ಭಿಣಿ!

Srinivas Rao BV
ಪಾಲ್ಘರ್: 12 ವರ್ಷದ ಬಾಲಕ 10 ವರ್ಷದ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಪರಿಣಾಮ ಬಾಲಕಿ ಗರ್ಭಿಣಿಯಾಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ನಡೆದಿದೆ.
ಇಬ್ಬರೂ ಸಹ ಅಕ್ಕಪಕ್ಕದಲ್ಲೇ ವಾಸಿಸುತ್ತಿದ್ದು, ಬಾಲಕಿಯ ಪೋಷಕರ ದೂರನ್ನು ಆಧರಿಸಿ ಪೊಲೀಸರು 12 ವರ್ಷದ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 
ದೂರಿನ ಪ್ರಕಾರ 12 ವರ್ಷದ ಬಾಲಕ ಬಾಲಕಿಯ ಮೇಲೆ ಕಳೆದ 4 ತಿಂಗಳಿನಿಂದ ಅತ್ಯಾಚಾರವೆಸಗುತ್ತಿದ್ದ ಎಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಬಾಲಕಿ ತನಗೆ ಹೊಟ್ಟೆ ನೋವಿರುವುದರ ಬಗ್ಗೆ ತಿಳಿಸಿದ್ದಳು ವೈದ್ಯರ ಬಳಿ ಕರೆದೊಯ್ದಾಗ ಆಕೆ ಗರ್ಭಿಣಿಯಾಗಿರುವುದರ ಬಗ್ಗೆ ಮಾಹಿತಿ ದೊರೆತಿದೆ. ಬಾಲಕಿಯನ್ನು ವಿಚಾರಿಸಿದಾಗ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರು ಬಾಲಕನ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. 
SCROLL FOR NEXT