ದೇಶ

ಭಾರತದ ಮೇಲೆ ಅಣ್ವಸ್ತ್ರ ಬಳಸಲು ಪಾಕ್ ಹೇಸುವುದಿಲ್ಲ; ಅಮರೀಂದರ್ ಸಿಂಗ್

Srinivas Rao BV
ಅಮೃತಸರ: ಭಾರತದ ವಿರುದ್ಧ ಸಾಂಪ್ರದಾಯಕ ಯುದ್ಧದಲ್ಲಿ ತಾನು ಸೋಲತ್ತೇನೆ ಎಂದು ಪಾಕಿಸ್ತಾನಕ್ಕೆ ಅನಿಸಿದರೆ, ಅದು ಪರಮಾಣು ಅಸ್ತ್ರ ಬಳಸಲು  ಹೇಸುವುದಿಲ್ಲ. ನೆರೆಯ ದೇಶದೊಂದಿಗೆ ಪೂರ್ಣ ಮಟ್ಟದ ಸಮರ ಸೂಕ್ತವಾದುದಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಅಣ್ವಸ್ತ್ರ ದೇಶಗಳು. ಎರಡೂ ದೇಶಗಳ ಹಿತದೃಷ್ಟಿಯಿಂದ ಸಮೂಹ ನಾಶದ  ಅಸ್ತ್ರಗಳ ಬಳಸುವುದು ಸರಿಯಲ್ಲ,  ಇತರ ಯುದ್ಧಗಳಲ್ಲಿ  ಸೋಲು ಅನುಭವಿಸಿದರೆ ಒಂದೊಮ್ಮೆ ಇಸ್ಲಾಮಾಬಾದ್ ಇಂತಹ ದುಸ್ಸಾಹಸಕ್ಕೆ ಕೈ ಹಾಕಿಬಹುದು ಎಂದು ಎಂಬ ಸಂಶಯ ವ್ಯಕ್ತಪಡಿಸಿದರು.
 ಪುಲ್ವಾಮ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಸಮಸ್ಯೆ ಇತ್ಯರ್ಥಪಡಿಸಲು ಭಾರತವೂ ಸಿದ್ದ ಎಂಬುದನ್ನು ವೈಮಾನಿಕ ದಾಳಿಗಳ ಮೂಲಕ ಭಾರತೀಯ ವಾಯುಪಡೆ ರುಜುವಾತುಪಡಿಸಿವೆ ಎಂದು ಮುಖ್ಯಮಂತ್ರಿಸಿಂಗ್  ಹೇಳಿದ್ದಾರೆ.  ವೈಮಾನಿಕ ದಾಳಿಯಲ್ಲಿ ಎಷ್ಟು ಮಂದಿ ಭಯೋತ್ಪಾದಕರು ಹತ್ಯೆಗೀಡಾಗಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅಮರೀಂದರ್ ಸಿಂಗ್, ದಾಳಿಯಲ್ಲಿ ಒಬ್ಬನೋ ಅಥವಾ ನೂರು ಮಂದಿ ಸತ್ತಿದ್ದಾರೂ ಗೊತ್ತಿಲ್ಲ.  
ಗಟ್ಟಿ ಸಂದೇಶವಂತೂ  ದೇಶದಿಂದ ರವಾನೆಯಾಗಿದೆ.ಅಮಾಯಕ ಯೋಧರು ಹಾಗೂ ನಾಗರೀಕರನ್ನು ಹತ್ಯೆಗೈದರೆ ಭಾರತ ಸುಮ್ಮನಿರುವುದಿಲ್ಲ ಸೂಕ್ತ ಶಿಕ್ಷೆ ನೀಡಲು ಸಿದ್ದವಾಗಿದೆ ಎಂಬುದು ಜಗತ್ತಿಗೆ ತಿಳಿಸಿದೆ ಎಂದರು. 
ಪಾಕಿಸ್ತಾನ ಭಾರೀ ಪ್ರಮಾಣದ  ಅರ್ಥಿಕ ಸಮಸ್ಯೆ ಎದುರಿಸುತ್ತಿದೆ. ತನ್ನ ಅಗತ್ಯಗಳಿಗಾಗಿ ಇತರ ಮುಸ್ಲಿಂ ದೇಶಗಳ ಮುಂದೆ ಅಂಗೈ ಚಾಚುತ್ತಿದೆ.ಹಾಗಾಗಿ ಭಾರತದ ವಿರುದ್ಧ  ಪೂರ್ಣ ಮಟ್ಟದಲ್ಲಿ ಯುದ್ದ ನಡೆಸಲು ಶಕ್ತವಾಗಿಲ್ಲ. ಉಭಯ ದೇಶಗಳು ಪರಮಾಣು ಅಸ್ತ್ರಗಳನ್ನು ಹೊಂದಿದ್ದು ಒಂದೊಮ್ಮೆ ಪಾಕಿಸ್ತಾನ ಹತಾಶೆಯಿಂದ ಪರಮಾಣು ಬಳಸಲು ಮುಂದಾದರೆ, ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
SCROLL FOR NEXT