ದಿಗ್ವಿಜಯ್ ಸಿಂಗ್ 
ದೇಶ

ಧೈರ್ಯವಿದ್ದರೆ ನನ್ನ ಮೇಲೆ ಕೇಸು ಹಾಕಿ: ಪ್ರಧಾನಿ ಮೋದಿಗೆ ದಿಗ್ವಿಜಯ್ ಸಿಂಗ್ ಸವಾಲು

ತಾವು ದೇಶ ವಿರೋಧಿ ಮತ್ತು ಪಾಕಿಸ್ತಾನ ಬೆಂಬಲಿಗ ಎಂಬ ಬಿಜೆಪಿ ನಾಯಕರ ಆರೋಪ ಸಾಬೀತುಪಡಿಸಿ ...

ನವದೆಹಲಿ: ದೇಶ ವಿರೋಧಿ ಮತ್ತು ಪಾಕಿಸ್ತಾನ ಬೆಂಬಲಿಗ ಎಂಬ ಬಿಜೆಪಿ ನಾಯಕರ ಆರೋಪ ಸಾಬೀತುಪಡಿಸಿ ತಮ್ಮ ಮೇಲೆ ಕೇಸು ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸವಾಲು ಹಾಕಿದ್ದಾರೆ.
ಪುಲ್ವಾಮಾ ಭಯೋತ್ಪಾದಕ ದಾಳಿ ಒಂದು ಆಕಸ್ಮಿಕ ಎಂದು ಉಲ್ಲೇಖಿಸಿದ್ದಕ್ಕೆ ಟೀಕಿಸಿದ ಪ್ರಧಾನಿ ಮೋದಿ ಮತ್ತು ಕೇಂದ್ರದ ಮೂವರು ಸಚಿವರುಗಳು ಹೇಳಿಕೆಗೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್, ನನ್ನನ್ನು ಪಾಕಿಸ್ತಾನ ಬೆಂಬಲಿಗ ಮತ್ತು ದೇಶ ವಿರೋಧಿ ಎಂದು ಹೇಳಿರುವ ದೆಹಲಿಯ ಪೊಲೀಸರು ಕೇಂದ್ರ ಸರ್ಕಾರದ ಹಿಡಿತದಲ್ಲಿದ್ದಾರೆ. ನಿಮಗೆ ಅಷ್ಟು ಧೈರ್ಯವಿದ್ದರೆ ನನ್ನ ಮೇಲೆ ಕೇಸು ಹಾಕಿಸಿ ಎಂದರು.
ಮೋದಿ ಮತ್ತು ಅವರ ಸಂಪುಟದ ಸಚಿವರು ತಮ್ಮ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ತಮ್ಮ ವಿರುದ್ಧ ದೇಶದ್ರೋಹಿ ಕೇಸನ್ನು ಕೂಡ ದಾಖಲಿಸಲು ನೋಡಿದ್ದಾರೆ. ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ವಿರುದ್ಧ ಮೋದಿಯವರು ಏನು ಕ್ರಮ ಕೈಗೊಂಡಿದ್ದಾರೆ. ಅದಕ್ಕೆ ಯಾರು ಕಾರಣರು ಎಂದು ಇದುವರೆಗೆ ಹೇಳಿಲ್ಲ. ಇದಕ್ಕೆ ಯಾರಾದರೂ ಕಾರಣರಾದವರ ವಿರುದ್ಧ ಮೋದಿಯವರು ಕ್ರಮ ಕೈಗೊಂಡಿದ್ದಾರೆಯೇ? ರಾಷ್ಟ್ರೀಯ ಭದ್ರತಾ ಮಂಡಳಿ, ಗುಪ್ತಚರ ದಳ ಅಥವಾ ರಾ ಮುಖ್ಯಸ್ಥರ ಬಳಿ ವಿವರಣೆ ಕೇಳಿದ್ದಾರೆಯೇ ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ