ದೇಶ

ಜಗನ್ ಮೋಹನ್ ರೆಡ್ಡಿ ಪಕ್ಷ ಸೇರಿದ ನಟಿ ಜಯಸುಧಾ ಪುತ್ರ ನಿಹಾರ್

Shilpa D
ಹೈದರಾಬಾದ್: ತೆಲಗು ದೇಶಂ ಪಕ್ಷದ ಮಾಜಿ ಶಾಸಕಿ ಹಾಗೂ ನಟಿ ಜಯಸುಧಾ ತಮ್ಮ ಪುತ್ರ ನಿಹಾರ್ ಕಪೂರ್ ಜೊತೆ ಗುರುವಾರ ವೈಎಸ್ ಆರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಹೈದಾರಾಬಾದ್ ನ ಲೋಟಸ್ ಪಾಂಡ್ ನಲ್ಲಿ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಜಯಸುಧಾ ಮತ್ತವರ ಪುತ್ರ ವೈಎಸ್ ಆರ್ ಕಾಂಗ್ರೆಸ್ ಸೇರಿದರು.
ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಬಯಕೆ, ಆ ನಿಟ್ಟಿನಲ್ಲಿ ಕೆಲಸ ಮಾಡಲು ನಾನು ಇಷ್ಟಪಟ್ಟು ವೈಎಸ್ ಆರ್ ಕಾಂಗ್ರೆಸ್ ಸೇರಿದ್ದೇನೆ ಎಂದು ಜಯಸುಧಾ ಹೇಳಿದ್ದಾರೆ. ವೈಎಸ್ ಆರ್ ಕಾಂಗ್ರೆಸ್ ಸೇರಿರುವುದು ನನಗೆ ಸಂತಸ ತಂದಿದೆ. ವಾಪಸ್ ನನ್ನ ಮನೆಗೆ ಬಂದಂತೆ ಅನಿಸುತ್ತಿದೆ ಎಂದು ಹೇಳಿದ್ದಾರೆ.
SCROLL FOR NEXT