ಜಮ್ಮು ಬಸ್ ನಿಲ್ದಾಣದಲ್ಲಿ ಗ್ರನೇಡ್ ದಾಳಿ ನಡೆದ ಸ್ಥಳದ ಚಿತ್ರ 
ದೇಶ

ಜಮ್ಮು ಬಸ್ ನಿಲ್ದಾಣದಲ್ಲಿ ಗ್ರನೇಡ್ ದಾಳಿ ನಡೆಸಿದ ಉಗ್ರ ಬಾಲಾಪರಾಧಿ

ಜಮ್ಮು ಬಸ್ ನಿಲ್ದಾಣದಲ್ಲಿ ನಿನ್ನೆ ಗ್ರನೇಡ್ ದಾಳಿ ನಡೆಸಿದ ಉಗ್ರ 16 ವರ್ಷದ ಬಾಲಾಪರಾಧಿಯಾಗಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ 50 ಸಾವಿರ ರೂ. ಪಡೆದಿದ್ದಾಗಿ ವಿಚಾರಣೆ ವೇಳೆಯಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನವದೆಹಲಿ: ಜಮ್ಮು ಬಸ್ ನಿಲ್ದಾಣದಲ್ಲಿ ನಿನ್ನೆ ಗ್ರನೇಡ್ ದಾಳಿ ನಡೆಸಿದ ಉಗ್ರ 16 ವರ್ಷದ ಬಾಲಾಪರಾಧಿಯಾಗಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ 50 ಸಾವಿರ ರೂ. ಪಡೆದಿದ್ದಾಗಿ ವಿಚಾರಣೆ ವೇಳೆಯಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಮ್ಮು ಬಸ್ ನಿಲ್ದಾಣದ ಬಳಿ ನಿನ್ನೆ ನಡೆದ ಗ್ರನೇಡ್ ಸ್ಪೋಟದ ವೇಳೆಯಲ್ಲಿ ಇಬ್ಬರು ಮೃತಪಟ್ಟು, 31 ಮಂದಿ ಗಾಯಗೊಂಡಿದ್ದರು. ಈ ದಾಳಿ ನಡೆಸಿದ ಉಗ್ರ ಮಾರ್ಚ್ 12ಕ್ಕೆ 16 ವರ್ಷ ಪೂರ್ಣಗೊಳಿಸಲಿದ್ದು,  ಜಮ್ಮು- ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗಾಗಿ  ಬಾಲಕರನ್ನು ಬಳಸಿಕೊಳ್ಳುತ್ತಿರುವುದು  ತಿಳಿದುಬಂದಿದೆ.

ಬಂಧಿಸಲಾಗಿರುವ ಉಗ್ರನ ಶಾಲಾ ದಾಖಲೆಗಳು, ಆಧಾರ್ ಕಾರ್ಡ್ ಸೇರಿದಂತೆ ಮತ್ತಿತರ ಎಲ್ಲಾ ದಾಖಲೆಗಳಲ್ಲಿ ಆತನ ಜನ್ಮ ದಿನ ಮಾರ್ಚ್ 12, 2003 ಆಗಿದೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮುನ್ನ ವಿಚಾರಣಾಧಿಕಾರಿಗಳು ಆತನ ಜನ್ಮ ದಿನವನ್ನು ಪರಿಶೀಲನೆ ಮಾಡಲಿದ್ದಾರೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮುವಿನ ಜನದಟ್ಟಣೆಯ ಪ್ರದೇಶದಲ್ಲಿ ದಾಳಿ ನಡೆಸುವಂತೆ ಕುಲ್ಗಾಮ್ ಹಿಜ್ಬುಲ್ ಮುಜಾಹಿದ್ದೀನ್  ಉಗ್ರ ಸಂಘಟನೆ ಮುಖ್ಯಸ್ಥ ಪಾಯಾಜ್ ನಿಂದ ಗ್ರನೇಡ್ ಪಡೆದುಕೊಂಡಿದ್ದಾಗಿ ಆತ ವಿಚಾರಣೆ ವೇಳೆಯಲ್ಲಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.

ಪುಲ್ವಾಮಾ ದಾಳಿ ನಡೆದ ಮೂರು ವಾರಗಳ ನಂತರ ಘಟನೆ ಜಮ್ಮು ಬಸ್ ನಿಲ್ದಾಣದಲ್ಲಿ ನಡೆದ ಗ್ರನೇಡ್ ದಾಳಿ ಕಳೆದ ವರ್ಷ ಮೇ ನಿಂದಾಚೆಗೆ ನಡೆದ ಮೂರನೇ  ದಾಳಿ ಇದಾಗಿದ್ದು,  ಬಂಧಿನ ಉಗ್ರನ ವಿಚಾರಣೆ ಮುಂದುವರೆದಿದೆ. ಕಾನೂನು ಪ್ರಕಾರ ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗುತ್ತದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ