ಹಳಿ ಮೇಲೆ ಪಬ್ ಜೀ ಆಡುತ್ತಿದ್ದ ಇಬ್ಬರು ರೈಲಿಗೆ ಸಿಕ್ಕಿ ಸಾವು!
ಪಬ್ ಜೀ ಆನ್ ಲೈನ್ ಗೇಮ್ ಗೀಳಿಗೆ ಮತ್ತೆ ಇಬ್ಬರು ಸಾವನ್ನಪ್ಪಿದ್ದು, ಜಗತ್ತಿನ ಪರಿವೇ ಇಲ್ಲದಂತೆ ಹಳಿ ಮೇಲೆ ಗೇಮ್ ಆಡಿಕೊಂಡು ತೆರಳುತ್ತಿದ್ದಾಗ ರೈಲು ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮುಂಬೈ: ಪಬ್ ಜೀ ಆನ್ ಲೈನ್ ಗೇಮ್ ಗೀಳಿಗೆ ಮತ್ತೆ ಇಬ್ಬರು ಸಾವನ್ನಪ್ಪಿದ್ದು, ಜಗತ್ತಿನ ಪರಿವೇ ಇಲ್ಲದಂತೆ ಹಳಿ ಮೇಲೆ ಗೇಮ್ ಆಡಿಕೊಂಡು ತೆರಳುತ್ತಿದ್ದಾಗ ರೈಲು ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಹಿಂಗೋಳಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹಿಂಗೋಳಿಯ ಕತ್ಕಾಳಿ ಬೈಪಾಸ್ ರೈಲ್ವೇ ಹಳಿ ಮೇಲೆ ಪಬ್ ಜೀ ಗೇಮ್ ಆಡಿಕೊಂಡು ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ರೈಲು ಹರಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನನ್ನು 24 ವರ್ಷದ ನಾಗೇಶ್ ಗೋರೆ (24 ವರ್ಷ) ಮತ್ತು ಸ್ವಪ್ಮಿ ಅನ್ನಪೂರ್ಣೆ (22 ವರ್ಷ) ಎಂದು ಗುರುತಿಸಲಾಗಿದೆ. ಪ್ರತ್ಯಕ್ಷ ದರ್ಶಿಗಳು ನೀಡಿರುವ ಹೇಳಿಕೆ ಅನ್ವಯ, ಇಬ್ಬರೂ ರೈಲ್ವೇ ಹಳಿ ಮೇಲೆ ಪಬ್ ಜೀ ಗೇಮ್ ಆಡಿಕೊಂಡು ತೆರಳುತ್ತಿದ್ದರು. ಈ ವೇಳೆ ಹೈದರಾಬಾದ್-ಅಜ್ಮೀರ್ ರೈಲು ಬಂದಿದ್ದು ಅವರಿಗೆ ತಿಳಿಯಲಿಲ್ಲ. ನೋಡ ನೋಡುತ್ತಿದ್ದಂತೆಯೇ ರೈಲು ಅವರ ಮೇಲೆ ಹರಿಯಿತು ಎಂದು ಹೇಳಿದ್ದಾರೆ.