ದೇಶ

ಜಮ್ಮು ಕಾಶ್ಮೀರ: ಭದ್ರತಾ ಪಡೆಗಳಿಂದ ಹಿಜ್ಬುಲ್‌ ಮುಜಾಹಿದ್ದೀನ್‌ ಭಯೋತ್ಪಾದಕ ಬಂಧನ

Raghavendra Adiga
ಅನಂತ್‌ನಾಗ್: ಹಿಜ್ಬುಲ್ ಮುಜಾಹಿದೀನ್ (ಎಚ್ಎಂ) ಭಯೋತ್ಪಾದಕನೊಬ್ಬನನ್ನು ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳು  ಗುರುವಾರ ಮಧ್ಯಾಹ್ನ ಬಂಧಿಸಿವೆ. 
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್‌ ವಿಶೇಷ ಕಾರ್ಯಾಚರಣೆ ತಂಡ (ಎಸ್ಒಜಿ) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹಿಜ್ಬುಲ್  ಸಂಘಟನೆಗೆ ಸೇರಿದ ರಾಮೀಜ್‌ ಅಹ್ಮದ್ ದರ್ ಎಂಬ ಭಯೋತ್ಪಾದಕನನ್ನು ಅನಂತ್‌ನಾಗ್‌ನ ಬಿಜ್ ಬೆಹರಾದಲ್ಲಿ ಬಂಧಿಸಲಾಗಿದೆ 
2014ರಿಂದ ನಡೆದಿರುವ ಅನೇಕ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಾಗೂ ಸಕ್ರಿಯವಾಗಿದ್ದ ದರ್‌ನಿಂದ ಕೆಲ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
SCROLL FOR NEXT