ಬಿಹಾರದಲ್ಲಿ ನಕ್ಸಲರ ಅಟ್ಟಹಾಸ, ಡೈನಾಮೆಟ್ ಸ್ಫೋಟಿಸಿ ಬಿಜೆಪಿ ಮುಖಂಡನ ಮನೆ ಧ್ವಂಸ!
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಬಿಹಾರದಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದ ಮಾವೋವಾದಿಗಳು ಬಿಜೆಪಿ ಮುಖಂಡನ ಮನೆಯನ್ನೇ ಸ್ಫೋಟಿಸಿದ್ದಾರೆ.
ಗಯಾ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಬಿಹಾರದಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದ ಮಾವೋವಾದಿಗಳು ಬಿಜೆಪಿ ಮುಖಂಡನ ಮನೆಯನ್ನೇ ಸ್ಫೋಟಿಸಿದ್ದಾರೆ.
ಬಿಹಾರದ ದುಮಾರಿಯಾದಲ್ಲಿ ಈ ಘಟನೆ ನಡೆದಿದ್ದು, ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿರುವ ನಕ್ಸಲೀಯರು ಬುಧವಾರ ತಡರಾತ್ರಿ ಡೈನಾಮೈ ಟ್ ಸ್ಫೋಟಗೊಳಿಸಿ ಬಿಜೆಪಿ ಮುಖಂಡ ಅಂಜು ಕುಮಾರ್ ಸಿಂಗ್ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಮನೆಯ ಎದುರುಭಾಗದ ಗೋಡೆ ಒಡೆದು ಛಿದ್ರವಾಗಿ ಹೋಗಿದೆ. ಅಂತೆಯೇ ಬಿಜೆಪಿ ಮುಖಂಡ ಅಂಜು ಕುಮಾರ್ ಗಾಯಗೊಂಡಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿ ವಿವರಿಸಿದೆ.
ಡೈನಾಮೆಟ್ ಸ್ಫೋಟಗೊಂಡು ಮನೆ ಧ್ವಂಸಗೊಂಡ ನಂತರ ಮನೆಯ ಗೋಡೆಗೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲೇ ಬೇಕೆಂಬ ಪೋಸ್ಟರ್ ಅನ್ನು ಮಾವೋವಾದಿಗಳು ಅಂಟಿಸಿದ್ದಾರೆ. ಘಟನೆ ಬಗ್ಗೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.