ದೇಶ

ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಪ್ರಕಟ: ಹುಡುಗಿಯರೇ ಟಾಪರ್ಸ್

Lingaraj Badiger
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ ಇ)ಯ 12ನೇ ತರಗತಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಉತ್ತರ ಪ್ರದೇಶದ ಇಬ್ಬರು ಹುಡುಗಿಯರು ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಉತ್ತರ ಪ್ರದೇಶದ ಕರಿಷ್ಮಾ ಅರೋರಾ ಹಾಗೂ ಹನ್ಸಿಕಾ ಶುಕ್ಲಾ ಅವರು 500 ಅಂಕಕ್ಕೆ 499 ಅಂಕ ಪಡೆಯುವ ಮೂಲಕ ಮೊದಲ ಸ್ಥಾನವನ್ನು ಇಬ್ಬರೂ ಹಂಚಿಕೊಂಡಿದ್ದಾರೆ.
ದೇಶಾದ್ಯಂತ ಒಟ್ಟು ಶೇ.83.4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಾಂತ್ಯವಾರು ಫಲಿತಾಂಶದಂತೆ, ತಿರುವನಂತಪುರಂ ಶೇ.98.2 ಉತ್ತೀರ್ಣತೆಯ ಮೂಲಕ ಪ್ರಥಮ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಚೆನ್ನೈ ಶೇ.92.93 ಹಾಗೂ ದೆಹಲಿ ಶೇ.91.87 ಇದೆ. 
ಹಿಂದಿನಂತೆಯೇ ಹೆಣ್ಣು ಮಕ್ಕಳು ಹುಡುಗರಿಗಿಂತ ಶೇ.9ರಷ್ಟು ಉತ್ತಮ ನಿರ್ವಹಣೆ ತೋರಿದ್ದಾರೆ. ಶೇ.88.7 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದರೆ, ಶೇ.79.4 ಗಂಡುಮಕ್ಕಳು ಹಾಗೂ ಶೇ.83.3ರಷ್ಟು ಮಂದಿ ತೃತೀಯ ಲಿಂಗಿಗಳು ಉತ್ತೀರ್ಣತೆ ಸಾಧಿಸಿದ್ದಾರೆ. 
ಸಿಬಿಎಸ್ ಇ 12ನೇ ತರಗತಿಯ ಫಲಿತಾಂಶವು ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್‌ - cbse.nic.in ನಲ್ಲಿ ಲಭ್ಯವಿದ್ದು, ಫಲಿತಾಂಶವನ್ನು ನೋಡಬಹುದಾಗಿದೆ. 
SCROLL FOR NEXT