ದೇಶ

ಬಸ್ತಾರ್, ದಾಂತೇವಾಡ: ಇದೆ ಮೊದಲ ಬಾರಿಗೆ ನಕ್ಸಲ್ ನಿಗ್ರಹಕ್ಕೆ ಮಹಿಳಾ ಪಡೆ ನೇಮಕ

Srinivas Rao BV
ನಕ್ಸಲ್ ಪೀಡಿತ ಬಸ್ತಾರ್ ಹಾಗೂ ದಾಂತೇವಾಡಗಳಲ್ಲಿ ಇದೇ ಮೊದಲ ಬಾರಿಗೆ ನಕ್ಸಲ್ ನಿಗ್ರಹಕ್ಕೆ ಮಹಿಳಾ ಕಮಾಂಡೋಗಳನ್ನು ನೇಮಕ ಮಾಡಲಾಗಿದೆ. 
ದಾಂತೇಶ್ವರಿ ಫೈಟರ್ಸ್ ಹೆಸರಿನ ಈ ತಂಡ ತರಬೇತಿ ಮುಕ್ತಾಯಗೊಳಿಸಿ ನಕ್ಸಲ್ ನಿಗ್ರಹ ಅಖಾಡಕ್ಕೆ ಇಳಿದಿವೆ. 
ಚತ್ತೀಸ್ ಗಢದ ಪೊಲೀಸ್ ಇಲಾಖೆ, ನಕ್ಸಲ್ ನಿಗ್ರಹಕ್ಕಾಗಿಯೇ ಪ್ರತ್ಯೇಕ ತಂದ ರಚನೆ ಮಾಡಿದ್ದು ಬಸ್ತಾರಿಯಾ ಬೆಟಾಲಿಯನ್ ಎಂದು ಹೆಸರಿಡಲಾಗಿದೆ. ಇಲ್ಲಿಂದ  ಜಿಲ್ಲಾ ಮೀಸಲು ಗಾರ್ಡ್ ಗೆ ಮಹಿಳೆಯರನ್ನು ನೇಮಕ ಮಾಡಿಕೊಂಡಿತ್ತು. ಈಗ ನಕ್ಸಲ್ ನಿಗ್ರಹ ತಂಡಕ್ಕೆ 30 ಮಹಿಳೆಯರು ಸೇರ್ಪಡೆಗೊಂಡಿದ್ದಾರೆ. 
ಈ ನಡೆಯನ್ನು ಮಹಿಳಾ ಸಬಲೀಕರಣ ಎಂದು ಶ್ಲಾಘಿಸಲಾಗುತ್ತಿದೆ. 
SCROLL FOR NEXT