ದೇಶ

ಅರುಣಾಚಲದಲ್ಲಿ ಉಗ್ರರ ಅಟ್ಟಹಾಸ: ಶಾಸಕ ತಿರೋಂಗ್ ಅಬೊ, ಅವರ ಪುತ್ರ ಸೇರಿ 11 ಮಂದಿ ಸಾವು

Lingaraj Badiger
ಗುವಾಹತಿ: ಅರುಣಾಚಲ ಪ್ರದೇಶದಲ್ಲಿ ಮಂಗಳವಾರ ಉಗ್ರರು ಅಟ್ಟಹಾಸ ಮೆರೆದಿದ್ದು, ಶಂಕಿತ ಉಗ್ರ ದಾಳಿಯಲ್ಲಿ ಎನ್ಎನ್‌ಪಿ ಶಾಸಕ ತಿರೋಂಗ್ ಅಬೊ ಹಾಗೂ ಅವರ ಪುತ್ರ ಸಸೇರಿ 11 ಮಂದಿ ಮೃತಪಟ್ಟಿದ್ದಾರೆ.
ಇಂದು ತಿರಪ್ ಜಿಲ್ಲೆಯ ಬೋಗಾಪನಿ ಗ್ರಾಮದಲ್ಲಿ ಕೋನ್ಸಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ಎನ್‌ಪಿ) ಶಾಸಕ ತಿರೋಂಗ್ ಅಬೊ ಅವರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ 42 ವರ್ಷದ ಶಾಸಕ, ಅವರ ಪುತ್ರ ಹಾಗೂ ಒಂಬತ್ತು ಮಂದಿ ಕಾರ್ಯಕರ್ತರು ಮೃತಪಟ್ಟಿದ್ದಾರೆ.
ಉಗ್ರರ ಈ ದಾಳಿಯನ್ನು ಮೇಘಾಲಯ ಮುಖ್ಯಮಂತ್ರಿ ಹಾಗೂ ಎನ್ ಪಿಪಿ ಅಧ್ಯಕ್ಷ ಕೊನ್ರಾಡ್ ಕೆ ಸಂಗ್ಮಾ ಅವರು ತೀವ್ರವಾಗಿ ಖಂಡಿಸಿದ್ದು, ದಾಳಿ ಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.
ಅಬೋ ಅವರು ಕೋನ್ಸಾ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದರು. ಅಲ್ಲದೆ ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅದರ ಫಲಿತಾಂಶ ಮೇ 23ಕ್ಕೆ ಹೊರಬೀಳಲಿದೆ.
SCROLL FOR NEXT