ದೇಶ

ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ: 'ಸಾವಸ್ಡೀ ಪಿಎಂ ಮೋದಿ ' ಕಾರ್ಯಕ್ರಮದಲ್ಲಿ ಭಾಗಿ 

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರದಿಂದ ಮೂರು ದಿನ ಅಧಿಕೃತ ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ದು ಶನಿವಾರ ಸಂಜೆ ಬ್ಯಾಂಕಾಕ್ ನಲ್ಲಿ ಸವಸ್ಡಿ ಪಿಎಂ ಮೋದಿ ಸಮುದಾಯ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.


ವಿದೇಶಗಳಲ್ಲಿ ಅನಿವಾಸಿ ಭಾರತೀಯರನ್ನು ಭೇಟಿ ಮಾಡಿ ಮಾತನಾಡುವುದು ನನಗೆ ಯಾವತ್ತಿಗೂ ವಿಶೇಷ. ಇಂದು ಸಂಜೆ 6 ಗಂಟೆಗೆ ಬ್ಯಾಂಕಾಕ್ ನಲ್ಲಿ ಥೈಲ್ಯಾಂಡ್ ನಲ್ಲಿರುವ ಭಾರತೀಯರೊಂದಿಗೆ ಮಾತನಾಡಲಿದ್ದೇನೆ. ಥೈಲ್ಯಾಂಡ್ ಪ್ರಗತಿಯಲ್ಲಿ ಅವರ ಪಾತ್ರ ಅತ್ಯಂತ ದೊಡ್ಡದು ಎಂದು ಪಿಎಂ ಇಂದು ಟ್ವೀಟ್ ಮಾಡಿದ್ದಾರೆ.


 ಈ ಸಂದರ್ಭದಲ್ಲಿ ಅವರು ಅಸಿಯಾನ್​-ಇಂಡಿಯಾ, ಈಸ್ಟ್​ ಏಷ್ಯಾ, ಆರ್​ಸಿಇಪಿ ಶೃಂಗಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ . ಥಾಯ್ಲೆಂಡ್ ಪ್ರಧಾನಿ ಪ್ರಯೂತ್ ಛಾನ್​-ಒ-ಚಾ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಬ್ಯಾಂಕಾಂಕ್​ಗೂ ಭೇಟಿ ನೀಡಲಿದ್ದಾರೆ.

SCROLL FOR NEXT