ದೇಶ

ಹರ್ಯಾಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಭೂಪಿಂದರ್ ಹೂಡಾ ನೇಮಕ

Nagaraja AB

ನವದೆಹಲಿ: ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್  ಹೂಡಾ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ್ನಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ನೇಮಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು  ಈ ವಿಷಯ ತಿಳಿಸಿದ ಹರ್ಯಾಣ ಉಸ್ತುವಾರಿ ಗುಲಾಮ್ ನಬಿ ಅಜಾದ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಹೂಡಾ ಅವರೆ ಹರ್ಯಾಣದ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಲಿದ್ದಾರೆ ಎಂದು  ತಿಳಿಸಿದರು.

ವೀಕ್ಷಕರಾಗಿ ಆಗಮಿಸಿದ ಮಧುಸೂಧನ್ ಮಿಸ್ತ್ರೀ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದು, ಹೂಡಾ ಅವರನ್ನು ವಿರೋಧ ಪಕ್ಷದ ನಾಯಕನ್ನಾಗಿ ನೇಮಿಸುವ ಬಗ್ಗೆ ಶಾಸಕರು ಸರ್ವಾನುಮತದಿಂದ ನಿರ್ಣಯವೊಂದನ್ನು ಕೈಗೊಂಡಿದ್ದು, ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ ಎಂದು ಅವರು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಹೂಡಾ ಹಾಗೂ ಹರ್ಯಾಣ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಶೆಲ್ಜಾ ಅವರ ಪ್ರಯತ್ನವನ್ನು ಹೊಗಳಿದ ಅಜಾದ್, ಪಕ್ಷಕ್ಕಾಗಿ ಅವರು ಒಗ್ಗೂಡಿ ಕೆಲಸ ಮಾಡಿದ್ದಾರೆ. ಕಡಿಮೆ ಸಮಯದಲ್ಲೂ ಕಾಂಗ್ರೆಸ್ ಉತ್ತಮ ರೀತಿಯ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ನೆರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

90 ಸದಸ್ಯ ಬಲದ ಹರ್ಯಾಣದಲ್ಲಿ ಬಿಜೆಪಿ 40, ಜೆಜೆಪಿ 10 ಹಾಗೂ ಕಾಂಗ್ರೆಸ್ 31, ರಾಷ್ಟ್ರೀಯ ಲೋಕ ದಳ, ಹರ್ಯಾಣ ಲೋಕಹಿತ ಪಾರ್ಟಿ ತಲಾ ಒಂದು ಹಾಗೂ ಪಕ್ಷೇತರರು ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಏಳು ಪಕ್ಷೇತರರು ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿದ್ದಾರೆ.

SCROLL FOR NEXT