ದೇಶ

ನಾವು ಮತ್ತು ಮಹಾರಾಷ್ಟ್ರ ಜನತೆ ಆದಿತ್ಯ ಠಾಕ್ರೆ ಸಿಎಂ ಆಗಲು ಬಯಸುತ್ತೇವೆ: ಸಂಜಯ್ ರಾವತ್ 

Sumana Upadhyaya

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಹೊರಬರುತ್ತಿದ್ದು ಬಿಜೆಪಿ ಹಾಗೂ ಶಿವಸೇನೆ ಮೈತ್ರಿಕೂಟಗಳು ಮುಂಚೂಣಿಯಲ್ಲಿವೆ.


ಈ ಬಾರಿಯ ಫಲಿತಾಂಶ ಹೊರಬಿದ್ದ ಮೇಲೆ ಸರ್ಕಾರ ರಚನೆಯಲ್ಲಿ ಶಿವಸೇನೆ ಕಿಂಗ್ ಮೇಕರ್ ಆಗುವ ಲಕ್ಷಣ ಗೋಚರಿಸುತ್ತಿದ್ದು ಈ ಸಂದರ್ಭದಲ್ಲಿ ಪಕ್ಷ ಬಹುದೊಡ್ಡ ಹುದ್ದೆಯ ಮೇಲೆ ಕಣ್ಣಿಟ್ಟು ಅದನ್ನು ಪಡೆಯುವ ಹಂಬಲ ತೋರುತ್ತಿರುವಂತೆ ಕಂಡುಬರುತ್ತಿದೆ.


ವೊರ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಆದಿತ್ಯ ಠಾಕ್ರೆ ಮೊದಲ ಸುತ್ತಿನ ಎಣಿಕೆಯಲ್ಲಿ 7,020 ಮತಗಳಿಂದ ಮುಂದಿದ್ದಾರೆ.ಹೀಗಾಗಿ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟು ಅದಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪಕ್ಷದ ಕಾರ್ಯಕರ್ತರು ಮತ್ತು ಮಹಾರಾಷ್ಟ್ರ ಜನತೆ ಆದಿತ್ಯ ಠಾಕ್ರೆ ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. 


ಇತ್ತ ನಾಗ್ಪುರ ನೈರುತ್ಯ ಕ್ಷೇತ್ರದಲ್ಲಿ ಗೆಲ್ಲಲು ಸಿಎಂ ದೇವೇಂದ್ರ ಫಡ್ನವೀಸ್ ಹರಸಾಹಸ ಪಡುತ್ತಿದ್ದಾರೆ. 

SCROLL FOR NEXT