ದೇಶ

ದೀಪಾವಳಿಯ 'ಮನ್ ಕಿ ಬಾತ್' ನಲ್ಲಿ ಸಂಚಿ ಹೊನ್ನಮ್ಮನ 'ಹದಿಬದೆಯ ಧರ್ಮ'ವನ್ನು ಸ್ಮರಿಸಿದ ನಮೋ

Raghavendra Adiga

ನವದೆಹಲಿ: ದೀಪಾವಳಿ ಹಬ್ಬದ ದಿನ ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಟ್ಟ "ಮನ್ ಕಿ ಬಾತ್" ಕಾರ್ಯಕ್ರಮದಲ್ಲಿ ಕನ್ನಡದ ಪ್ರಮುಖ ಮಹಿಳಾ ಕವಯಿತ್ರಿ ಸಂಚಿ ಹೊನ್ನಮ್ಮಳನ್ನು ಸ್ಮರಿಸಿದ್ದಾರೆ.

ಸಂಚಿ ಹೊನ್ನಮ್ಮಳ "ಹದಿಬದೆಯ ಧರ್ಮ" ಕಾವ್ಯದ ಪದ್ಯವನ್ನು ಹೇಳುವ ಮೂಲಕ  ಕನ್ನಡ ಕಾವ್ಯ ಹಾಗೂ ಕವಯಿತ್ರಿಯನ್ನು ಕೊಂಡಾಡಿದ್ದಾರೆ. ಐವತ್ತಾರನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನಡುಗನ್ನಡ ಪದ್ಯದ ಸಾಲುಗಳನ್ನು ಉಲ್ಲೇಖಿಸಿದ್ದಾರೆ.

ಮಹಿಳಾ ಸಬಲೀಕರಣದ ಕುರಿತು ಮಾತನಾಡುತ್ತಾ ಮೋದಿ "ಹದಿಬದೆಯ ಧರ್ಮ" ಕಾವ್ಯದ ಸಾಲುಗಳನ್ನು ಹೇಳಿದ್ದಾರೆ. ಸಂಚಿ ಹೊನ್ನಮ್ಮಳ ಕಾವ್ಯವು . ಹೆಣ್ಣಿನ ಅಸಮಾನತೆಯನ್ನು ಬಲವಾಗಿ ಖಂಡಿಸಿದ ಗ್ರಂಥವಾಗಿದೆ.

ಹದಿನೇಳನೇ ಶತಮಾನದಲ್ಲಿ ಮೈಸೂರು ಒಡೆಯರ್ ಆಸ್ಥಾನದಲ್ಲಿ ಸಂಚಿಯಾಗಿದ್ದ ಹೊನ್ನಮ್ಮ ತನ್ನ ಕಾವ್ಯದ ಮೂಲಕವೇ ಅಂದಿನ ಮಹಿಳೆಯರ ಸ್ಥಿತಿಗತಿಗಳ ಕುರಿತು ಬೆಳಕು ಚೆಲ್ಲಿದ್ದರು. 

SCROLL FOR NEXT