ದೇಶ

ರಾಷ್ಟ್ರಪತಿಗಳ ವಿಮಾನ ಹಾರಾಟಕ್ಕೆ ವಾಯುಪ್ರದೇಶ ನಿರಾಕರಣೆ: ಪಾಕ್‌ ನಿರ್ಧಾರಕ್ಕೆ ಭಾರತ ವಿಷಾದ

Lingaraj Badiger

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿದ್ದ ವಿಮಾನ ಹಾರಾಟಕ್ಕೆ ತನ್ನ ವಾಯು ಪ್ರದೇಶವನ್ನು ನಿರಾಕರಿಸಿರುವ ಪಾಕಿಸ್ತಾನ ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ಭಾರತ ಶನಿವಾರ ತೀವ್ರ ವಿಷಾದ ವ್ಯಕ್ತಪಡಿಸಿದೆ.

ಇಂತಹ ಏಕಪಕ್ಷೀಯ ಕ್ರಮಗಳ ನಿರರ್ಥಕತೆಯನ್ನು ಗುರುತಿಸಲು ನಾವು ಪಾಕಿಸ್ತಾನಕ್ಕೆ ಕರೆ ನೀಡುತ್ತೇವೆ ಎಂದು ವಿದೇಶಾಂಕ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ವಿವಿಐಪಿ ವಿಶೇಷ ಹಾರಾಟಕ್ಕೆ ಓವರ್‌ಫ್ಲೈಟ್ ಕ್ಲಿಯರೆನ್ಸ್ ನಿರಾಕರಿಸುವ ಪಾಕಿಸ್ತಾನ ಸರ್ಕಾರದ ನಿರ್ಧಾರಕ್ಕೆ ನಾವು ವಿಷಾದಿಸುತ್ತೇವೆ. ಯಾವುದೇ ಸಾಮಾನ್ಯ ದೇಶವು ವಾಡಿಕೆಯಂತೆ ಇದಕ್ಕೆ ಅನುಮತಿ ನೀಡುತ್ತದೆ ಎಂದು ಅವರು ಪಾಕ್ ನಡೆಯನ್ನು ಟೀಕಿಸಿದ್ದಾರೆ.

ಕೋವಿಂದ್ ಅವರು ಮೂರು ರಾಷ್ಟ್ರಗಳ ಪ್ರವಾಸಕ್ಕೆ ತೆರಳಲಿದ್ದು, ಐಸ್ ಲೆಂಡ್, ಸ್ವಿಟ್ಜರ್ಲೆಂಡ್ ಮತ್ತು ಸ್ಲೊವೇನಿಯಾದಲ್ಲಿ ಉನ್ನತ ಮಟ್ಟದ ನಾಯಕರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಹೀಗಾಗಿ ಅವರ ವಿಮಾನ ಪ್ರಯಾಣಕ್ಕಾಗಿ ಭಾರತ ಸರ್ಕಾರ ಪಾಕಿಸ್ತಾನದ ವಾಯುಗಡಿ ಬಳಕೆ ಮಾಡಲು ಅನುಮತಿ ಕೇಳಿತ್ತು. ಇದಕ್ಕೆ ಪಾಕಿಸ್ತಾನ ಸರ್ಕಾರ ನಿರಾಕರಿಸಿದ್ದು, ಭಾರತದ ಇತ್ತೀಚಿಗಿನ ನಡೆಯಿಂದಾಗಿ ತಾವು ಕೋವಿಂದ್ ಅವರಿಗೆ ವಾಯುಗಡಿ ಬಳಕೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದೆ.

SCROLL FOR NEXT