ಸಾಂದರ್ಭಿಕ ಚಿತ್ರ 
ದೇಶ

ಮೊಬೈಲ್ ತಂದ ಆಪತ್ತು; ಪತಿ ಜೊತೆ ಮಾತನಾಡುತ್ತಾ ಮೇಲೆ ಕುಳಿತ ಮಹಿಳೆಗೆ ಕಚ್ಚಿದ ಹಾವು, ಸಾವು!

ಮೈಮರೆತು ಪತಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಬಂದ ಮಹಿಳೆಯೊಬ್ಬರು ಮಿಲನ ಕ್ರಿಯೆಯಲ್ಲಿ ತೊಡಗಿದ್ದ ಅವಳಿ ಹಾವುಗಳ ಮೇಲೆ ಕುಳಿತುಕೊಂಡಿದ್ದು, ಹಾವು ಕಚ್ಚಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಗೋರಾಖ್ಪುರದ ರಿಯಾನ್ವ್ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗೋರಾಖ್ಪುರ: ಮೈಮರೆತು ಪತಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಬಂದ ಮಹಿಳೆಯೊಬ್ಬರು ಮಿಲನ ಕ್ರಿಯೆಯಲ್ಲಿ ತೊಡಗಿದ್ದ ಅವಳಿ ಹಾವುಗಳ ಮೇಲೆ ಕುಳಿತುಕೊಂಡಿದ್ದು, ಹಾವು ಕಚ್ಚಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಗೋರಾಖ್ಪುರದ ರಿಯಾನ್ವ್ ಗ್ರಾಮದಲ್ಲಿ ಬುಧವಾರ ನಡೆದಿದೆ.

ಥೈಲ್ಯಾಂಡ್ ನಲ್ಲಿ ಕೆಲಸ ಮಾಡಿಕೊಂಡಿರುವ ಜೈ ಸಿಂಗ್ ಯಾದವ್ ಎಂಬುವವರ ಪತ್ನಿ ಗೀತಾ ಸಾವನ್ನಪ್ಪಿದ ಮಹಿಳೆ ಎಂದು ತಿಳಿದುಬಂದಿದೆ. 

ಮಂಚದ ಮೇಲೆ ಹೊದಿಕೆ ಹಾಕಿದ್ದರ ಕೆಳಗೆ ಅವಳಿ ಹಾವುಗಳು ತಮ್ಮ ಏಕಾಂತದ ಕಾಲ ಕಳೆಯುತ್ತಿದ್ದವು. ಈ ವೇಳೆ ಪತಿಯೊಂದಿಗೆ ಫೋನ್ ನಲ್ಲಿ ಮಾತನಾಡುತ್ತಾ ಬಂದ ಮಹಿಳೆ ಹಾವುಗಳ ಮೇಲೆ ಕುಳಿತುಕೊಂಡಿದ್ದಾರೆ. ಕೂಡಲೇ ಹಾವುಗಳು ಮಹಿಳೆಯನ್ನು ಕಚ್ಚಿವೆ. ಈ ವೇಳೆ ಮಹಿಳೆ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ವೇಳೆ ಮಹಿಳೆ ಸಾವನ್ನಪ್ಪಿದ್ದಾರೆ. 

ಮಹಿಳೆ ಸಾವನ್ನಪ್ಪಿದ ಬಳಿಕ ಕುಟುಂಬ ಸದಸ್ಯರು ಮನೆಗೆ ಬಂದ ಸಂದರ್ಭದಲ್ಲೂ ಹಾವುಗಳು ಹಾಸಿಗೆ ಮೇಲೆ ಆಟವಾಡುತ್ತಿರುವುದು ಕಂಡು ಬಂದಿದೆ. ಬಳಿಕ ಸ್ಥಳೀಯರು ಹಾವುಗಳನ್ನು ಬಡಿದು ಸಾಯಿಸಿದ್ದಾರೆ. 

ಹಾವುಗಳು ಏಕಾಂತ ಸಮಯ ಕಳೆಯುತ್ತಿರುವ ವೇಳೆಯೇ ಮಹಿಳೆ ಅವುಗಳ ಮೇಲೆ ಕುಳಿತ ಪರಿಣಾಮ ಕಚ್ಚಿದೆ ಎಂದು ಪ್ರಾಣಿ ತಜ್ಞರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು