ದೇಶ

ಕಾಶ್ಮೀರದ ರಾಜಕಾರಣಿಗಳನ್ನು18 ತಿಂಗಳಿಗೂ ಹೆಚ್ಚು ಕಾಲ ಗೃಹ ಬಂಧನದಲ್ಲಿರಿಸಲ್ಲ -ಜೀತೇಂದ್ರ ಸಿಂಗ್

Nagaraja AB

ನವದಹಲಿ: ಕಾಶ್ಮೀರದ ರಾಜಕಾರಣಿಗಳನ್ನು 18 ತಿಂಗಳಿಗೂ ಹೆಚ್ಚಿನ ಕಾಲ ಗೃಹ ಬಂಧನದಲ್ಲಿ ಇರಿಸಿಕೊಳ್ಳುವುದಿಲ್ಲ , ಜಮ್ಮು- ಕಾಶ್ಮೀರದ ರಾಜಕಾರಣಿಗಳನ್ನು ಬಂಧಿಸಿಲ್ಲ, ಆದರೆ, ಅವರನ್ನು ಗೃಹ ಬಂಧನದಲ್ಲಿಟ್ಟಿರುವುದಾಗಿ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ.

ಕಣಿವೆ ರಾಜ್ಯದ ರಾಜಕಾರಣಿಗಳನ್ನು  ವಿಐಪಿ ಬಂಗ್ಲೆಗಳಲ್ಲಿ ಇರಿಸಲಾಗಿದ್ದು, ಹಾಲಿವುಡ್ ಸಿನಿಮಾಗಳ ಸಿಡಿಗಳನ್ನು ಅವರಿಗೆ ನೀಡಿದ್ದೇವೆ. ಜಿಮ್ ಸೌಲಭ್ಯ ಕೂಡಾ ಕಲ್ಪಿಸಲಾಗಿದೆ. ಅವರನ್ನು 18 ತಿಂಗಳಿಗೂ ಹೆಚ್ಚಿನ ಕಾಲ ಗೃಹ ಬಂಧನದಲ್ಲಿ ಇರಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ಆಗಸ್ಟ್ 5 ರಿಂದಲೂ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ರಾಜಕಾರಣಿಗಳನ್ನು  ಗೃಹ ಬಂಧನದಲ್ಲಿ ಇರಿಸಲಾಗಿದೆ. 

ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು, ಜಮ್ಮು- ಕಾಶ್ಮೀರ ವ್ಯಾಪ್ತಿಯನ್ನು ಇತ್ಯರ್ಥಪಡಿಸುವಲ್ಲಿ ನಾವು ಬದ್ಧವಾಗಿದ್ದೇವೆ. ಈ ಸಂಬಂಧ 1994ರಲ್ಲಿ ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಜಿತೇಂದ್ರ ಸಿಂಗ್  ಹೇಳಿದ್ದಾರೆ.

SCROLL FOR NEXT