ದೇಶ

ವಿದ್ಯಾಸಾಗರ್ ನಿವಾಸವನ್ನು ಸ್ಮಾರಕವನ್ನಾಗಿಸಲು ಪಶ್ಚಿಮ ಬಂಗಾಳ ಸರ್ಕಾರ ಯೋಜನೆ

Nagaraja AB

ಕೊಲ್ಕತ್ತಾ: 19ನೇ ಶತಮಾನದ ಸಮಾಜ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ ನೆಲೆಸಿದ್ದ ಉತ್ತರ ಕೊಲ್ಕತ್ತಾದಲ್ಲಿನ ನಿವಾಸವನ್ನು ಸ್ಮಾರಕವನ್ನಾಗಿಸಲು  ಪಶ್ಚಿಮ ಬಂಗಾಳ ಸರ್ಕಾರ ಯೋಜನೆ ಹಾಕಿಕೊಂಡಿದೆ ಎಂದು ಅಲ್ಲಿನ ಶಿಕ್ಷಣ ಸಚಿವ ಪಾರ್ಥ ಚಟ್ಟಾರ್ಜಿ ಹೇಳಿದ್ದಾರೆ.

ವಿದ್ಯಾಸಾಗರ್ ನಿವಾಸ ಬಾದುರ್ ಬಾಗನ್ ನ್ನು ಸ್ಮಾರಕವನ್ನಾಗಿ ನಿರ್ಮಾಣ ಮಾಡಲಾಗುವುದು, ಅಲ್ಲಿ ವಿದ್ಯಾಸಾಗರ್ ಅವರ ಭಾವಚಿತ್ರಗಳು, ಮಾದರಿಗಳನ್ನು ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ 200ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾಸಾಗರ್ ಅಕಾಡೆಮಿ ಉದ್ಘಾಟಿಸಿ, ಅಮಾಡರ್ ವಿದ್ಯಾಸಾಗರ್ ಮತ್ತು ಚೊಟೊದಾರ್ ವಿದ್ಯಾಸಾಗರ್ ಪ್ರತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪಾರ್ಥ ಚಟ್ಟಾರ್ಜಿ, ವಿದ್ಯಾಸಾಗರ್ ಮನೆಯಲ್ಲಿ ಬಳಸಲಾಗುತ್ತಿದ್ದ ದಿನಬಳಕೆಯ ವಸ್ತುಗಳನ್ನು ಸ್ಮಾರಕಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು ಎಂದರು.

SCROLL FOR NEXT