ದೇಶ

ಭೂಪಾಲ್: ಮಿಗ್ 21 ದುರಂತ ಮಾಸುವ ಮುನ್ನವೇ ಚೀತಾ ಚಾಪರ್ ಪತನ, ಇಬ್ಬರು ಪೈಲಟ್ ಗಳ ಸಾವು

Srinivasamurthy VN

ಭೂತಾನೀಸ್ ಆರ್ಮಿ ಪೈಲಟ್ ಕ್ಯಾಂಪ್ ನಲ್ಲಿ ಅಪಘಾತ, ಸೇನೆಯಿಂದ ತನಿಖೆಗೆ ಆದೇಶ

ಭೂತಾನ್: ಭೂತಾನ್ ನಲ್ಲಿ ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ದುರಂತದಲ್ಲಿ ಹೆಲಿಕಾಪ್ಟರ್ ನಲ್ಲಿ ಇಬ್ಬರೂ ಪೈಲಟ್ ಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಭೂತಾನೀಸ್ ಆರ್ಮಿ ಪೈಲಟ್ ಕ್ಯಾಂಪ್ ಗೆ ಸೇರಿದ ಚೀತಾ ಹೆಲಿಕಾಪ್ಟರ್, ಭೂತಾನ್ ನಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಇಂಡಿಯನ್ ಮಿಲಿಟರಿ ಟ್ರೈನಿಂಗ್ ಟೀಮ್ (IMTRAT)ನ ಇಬ್ಬರು ಪೈಲಟ್ ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪೂರ್ವ ಭೂತಾನ್ ನಲ್ಲಿ ಈ ಅಪಘಾತವಾಗಿದ್ದು, ಮೃತ ಪೈಲಟ್ ಗಳು ಲೆಫ್ಟಿನೆಂಟ್ ಕರ್ನಲ್ ಸ್ಥಾನಮಾನದ ಅಧಿಕಾರಿಗಳು ಎಂದು ತಿಳಿದುಬಂದಿದೆ. 

ಇತ್ತೀಚೆಗಷ್ಟೇ ಗ್ವಾಲಿಯರ್ ನಲ್ಲಿ ಭಾರತೀಯ ವಾಯು ಸೇನೆಯ ಮಿಗ್ 21 ತರಬೇತಿ ಯುದ್ಧ ವಿಮಾನ ಪತನವಾಗಿತ್ತು. ಇಂದಿನ ಅಪಘಾತವೂ ಸೇರಿದಂತೆ ಈ ವರ್ಷ ದೇಶದ ವಿವಿಧ ಮೂಲಗಳಲ್ಲಿ ಸಂಭವಿಸಿದ ವಿಮಾನ ದುರಂತಗಳ ಸಂಖ್ಯೆ 14ಕ್ಕೆ ಏರಿಕೆಯಾದಂತಾಗಿದೆ.

SCROLL FOR NEXT