ದೇಶ

ಜಾಗತಿಕ ಬಳಕೆಗೆ ಪರಿಹಾರ ಕಂಡುಹಿಡಿಯುವ ಗುರಿ ಮತ್ತು ಬದ್ಧತೆ ಭಾರತದ ಮುಂದಿದೆ: ಪ್ರಧಾನಿ ಮೋದಿ 

Sumana Upadhyaya

ಚೆನ್ನೈ: ವಿಶ್ವಾದ್ಯಂತ ಎಲ್ಲರ ಬಳಕೆಗಾಗಿ ಭಾರತೀಯ ಸಂಶೋಧನಾ ಪರಿಸರ ವ್ಯವಸ್ಥೆ ಸಹಾಯವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.


ಚೆನ್ನೈಯ ಐಐಟಿ ಮದ್ರಾಸ್ ನಲ್ಲಿಂದು ಮೋದಿಯವರು ಸಿಂಗಾಪುರ-ಭಾರತ ಹ್ಯಾಕಥಾನ್ 2019ನ್ನು ಉದ್ದೇಶಿಸಿ ಮಾತನಾಡಿ, ಶಾಲಾ ಹಂತದಿಂದ ಉನ್ನತ ಶಿಕ್ಷಣ, ಸಂಶೋಧನೆಯವರೆಗಿನ ಪರಿಸರ ವ್ಯವಸ್ಥೆಯನ್ನು ರಚಿಸಲಾಗಿದ್ದು ಅದು ಸಂಶೋಧನೆಗೆ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ. ಸ್ಟಾರ್ಟ್ ಅಪ್ ವ್ಯವಸ್ಥೆಯಲ್ಲಿ ಪ್ರಮುಖ ಮೂರು ದೇಶಗಳ ಸಾಲಿನಲ್ಲಿ ನಮ್ಮ ದೇಶ ಮೂರನೇ ಸ್ಥಾನದಲ್ಲಿದೆ ಎಂದರು.


ಭಾರತವು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆ ಮತ್ತು ನಾವೀನ್ಯತೆ ಪಡೆಯಲು ಸಜ್ಜಾಗಿದ್ದು, ಸ್ಟಾರ್ಟ್ ಅಪ್ ಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಹೇಳಿದರು.


ನಾವು ಎರಡು ದೊಡ್ಡ ಕಾರಣಗಳಿಗಾಗಿ ನಾವೀನ್ಯತೆ ಮತ್ತು ಕಾಲಾವಧಿಯನ್ನು ಪ್ರೋತ್ಸಾಹಿಸುತ್ತಿದ್ದೇವೆ - ಒಂದು ಜೀವನವನ್ನು ಸುಲಭಗೊಳಿಸಲು ಭಾರತದ ನಾವೀನ್ಯ ಪರಿಸರ ವ್ಯವಸ್ಥೆ ಮೂಲಕ ಪರಿಹಾರಗಳನ್ನು ಕಂಡುಹಿಡಿಯುವುದು ಮತ್ತು ಇನ್ನೊಂದು ಇಡೀ ವಿಶ್ವದ ಜಾಗತಿಕ ಬಳಕೆಗಳಿಗೆ ಪರಿಹಾರ ಒದಗಿಸುವುದು. ಭಾರತದ ಮುಂದೆ ಈ ಎರಡು ಗುರಿ ಮತ್ತು ಬದ್ಧತೆಗಳಿವೆ ಎಂದು ಹೇಳಿದರು.


ಹ್ಯಾಕಥಾನ್ ನಲ್ಲಿ ಭಾಗಿಯಾದವರು ಒಂದು ಕ್ಯಾಮರಾ ಸೃಷ್ಟಿ ಮಾಡಿರುವುದನ್ನು ಉಲ್ಲೇಖಿಸಿದ ಅವರು ಇದು ನಮ್ಮ ಸಂಸತ್ತಿಗೆ ಉಪಯೋಗವಾಗಬಹುದು. ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರ ಜೊತೆ ಈ ಕುರಿತು ಮಾತನಾಡುತ್ತೇನೆ. ಸಂಸತ್ತಿನಲ್ಲಿ ಯಾರು ಗಮನವಿಟ್ಟು ಕೇಳುತ್ತಾರೆ, ಯಾರು ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳಲು ಈ ಕ್ಯಾಮರಾ ಸಹಾಯವಾಗಬಹುದು ಎಂದಾಗ ಸಭೆಯಲ್ಲಿದ್ದವರು ನಗೆಗಡಲಲ್ಲಿ ತೇಲಿಹೋದರು.

SCROLL FOR NEXT