ದೇಶ

ಮಹಾರಾಷ್ಟ್ರದಲ್ಲಿ ಕೊರೋನಾ ಮರಣ ಮೃದಂಗ: 48 ಗಂಟೆಗಳಲ್ಲಿ ಮತ್ತೊಬ್ಬ ಪೊಲೀಸ್ ಮಹಾಮಾರಿಗೆ ಬಲಿ

Manjula VN

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, 52 ವರ್ಷದ ಮತ್ತೊಬ್ಬ ಪೊಲೀಸ್ ಒಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಸೋಂಕಿನಿಂದ ಮೃತಪಟ್ಟಿರುವ ಪೊಲೀಸ್ ಕೆಲ ದಿನಗಳಿಂದ ವೈರಸ್ ನಿಂದ ಬಳಲುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. 

ಎರಡು ದಿನಗಳ ಹಿಂದೆಯಷ್ಟೇ 57 ವರ್ಷದ ಪೇದೆಯೊಬ್ಬರು ಮೃತಪಟ್ಟಿದ್ದರು. ದಕ್ಷಿಣ ಮುಂಬೈನ ವೋರ್ಲಿ ನಾಕಾ ಎಂಬ ಪ್ರದೇಶದಲ್ಲಿ ಪೇದೆ ವಾಸವಿದ್ದರು ಎಂದು ಹೇಳಲಾಗುತ್ತಿತ್ತು. 

ಈ ವರೆಗೂ ಮುಂಬೈನಲ್ಲಿ 15 ಅಧಿಕಾರಿಗಳೂ ಸೇರಿದಂತೆ 96 ಮಂದಿ ಪೊಲೀಸ್ ಸಿಬ್ಬಂದಿಗಳಲ್ಲಿ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT