ದೇಶ

ಅಮೆರಿಕದಿಂದ ಮತ್ತೆ 100 ವೆಂಟಿಲೇಟರ್ ಭಾರತಕ್ಕೆ ಹಸ್ತಾಂತರ 

Nagaraja AB

ವಾಷಿಂಗ್ಟನ್: ಕೊರೋನಾ ವಿರುದ್ದ ಹೋರಾಡಲು ಅಮೆರಿಕದಿಂದ ಎರಡನೇ  ಕಂತಿನಲ್ಲಿ  ಮತ್ತೆ 100 ವೆಂಟಿಲೇಟರ್  ಭಾರತಕ್ಕೆ ಹಸ್ತಾಂತರವಾಗಿದೆ. ಹೀಗಾಗಿ ಒಟ್ಟು 200 ವೆಂಟಿಲೇಟರ್ ಗಳು ದೇಶಕ್ಕೆ ಬಂದಂತಾಗಿವೆ. 

ಅಮೆರಿಕ ಸರ್ಕಾರ ಅಂತಾರಾಷ್ಠ್ರೀಯ ಅಭಿವೃದ್ದಿ ಹಾಗೂ ರೆಡ್ ಕ್ರಾಸ್ ಸಹಕಾರದೊಂದಿಗೆ ಎರಡನೇ ಕಂತಿನಲ್ಲಿ 100 ವೆಂಟಿಲೇಟರ್  ನೀಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಭರವಸೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಅಮೆರಿಕಾ ಹೇಳಿದೆ.

ಈ 100 ವೆಂಟಿಲೇಟರ್ ಗಳನ್ನು ಗಂಭೀರ ಸ್ಥಿತಿಯಲ್ಲಿರುವ ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಬಹುದಾಗಿದೆ ಎಂದು ಅಮೆರಿಕ ರಾಯಭಾರಿ ಕೆನ್ನೆತ್  ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ಮೊದಲ ಕಂತಿನಲ್ಲಿ ಬಂದಿದ್ದ ವೆಂಟಿಲೇಟರ್ ಗಳನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎಂಟು ವಲಯಗಳಲ್ಲಿ ಕೋವಿಡ್-19 ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅಳವಡಿಸಲಾಗಿದೆ.

SCROLL FOR NEXT