ದೇಶ

ಜಾಮೀನು ಪಡೆದು 32 ವರ್ಷಗಳ ನಂತರ 5 ವರ್ಷಗಳ ಶಿಕ್ಷೆ ಅನುಭವಿಸಲು ಮತ್ತೆ ಜೈಲು ಸೇರಿದ ಆರೋಪಿ!

Raghavendra Adiga

ಕಟಕ್: ಮಯೂರ್‌ಭಂಜ್ ಜಿಲ್ಲೆಯ ಬಿಸೋಯಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 33 ವರ್ಷದ ಹಿಂದೆ ನಡೆದ  ಹತ್ಯೆ ಪ್ರಕರಣದಲ್ಲಿ ವ್ಯಕ್ತಿಯ ಅಪರಾಧವನ್ನು ಒಡಿಶಾ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ಬರಿಪಾಡಾದ ಸೆಷನ್ಸ್ ಕೋರ್ಟ್ ಐಪಿಸಿಯ ಸೆಕ್ಷನ್ 304 (II) ಅಡಿಯಲ್ಲಿ ಶಿಕ್ಷೆಗೊಳಗಾದ ನಂತರವೂ 1988 ರಿಂದ ಜಾಮೀನಿನ ಮೇಲೆ ಹೊರಗಿದ್ದ 65 ವರ್ಷದ ಗುಲಿಯಾ ಮಾಂಜಿಗೆ ಇದೀಗ ಕೋರ್ಟ್ ಐದು ವರ್ಷ ಜೈಲುಶಿಕ್ಷೆ ವಿಧಿಸಿದೆ. ಈ ಹಿಂದೆ ಅಕ್ಟೋಬರ್ 3, 1988 ರಂದು ಸೆಷನ್ಸ್ ನ್ಯಾಯಾಲಯವು ಮಾಂಜಿಗೆ ಏಳು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.

ಹಾಗಿದ್ದರೂ ಹೈಕೋರ್ಟ್ ಶಿಕ್ಷೆಯನ್ನು ಮಾರ್ಪಡಿಸಿದ್ದು ಉಳಿದ ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಲು ಎರಡು ವಾರಗಳಲ್ಲಿ  ಪೋಲೀಸರೆದುರು ಶರಣಾಗಬೇಕೆಂದು ಹೇಳಿದೆ.. ಅಪರಾಧ ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ಮಾಂಜಿಕ್ರಿಮಿನಲ್ ಮೇಲ್ಮನವಿಯನ್ನು ನವೆಂಬರ್ 15, 1988 ರಂದು ಒಪ್ಪಿಕೊಳ್ಳಲಾಗಿದ್ದು  ಆ ದಿನ ಅವರಿಗೆ ಜಾಮೀನು ನೀಡಲಾಗುತ್ತು.

ತೀರ್ಪನ್ನು ಪ್ರಕಟಿಸುವ ಮೊದಲು, ನ್ಯಾಯಮೂರ್ತಿ ಎಸ್.ಕೆ.ಸಾಹೂ ಮೇಲ್ಮನವಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವಿಚಾರಿಸಿದರು. ಆಗಸ್ಟ್ 22, 2020 ರಂದು ತನ್ನ ವರದಿಯಲ್ಲಿ, ಬಿಸೋಯಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮೇಲ್ಮನವಿ ಕೊಟ್ಟಾತನಿಗೆ ಈಗ ಸುಮಾರು 65 ವರ್ಷಆಗಿದೆ, ಹಾಗೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೇರೆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ಸೂಚಿಸಿದ್ದಾರೆ. ಅಪರಾಧಿಯು ಪತ್ನಿ ಹಾಗೂ ಇಬ್ಬರು ಗಂಡುಮಕ್ಕಳನ್ನು ಹೊಂದಿದ್ದಾರೆ.ಹಿರಿಯ ಮಗನಿಗೆ ಸುಮಾರು 36 ವರ್ಷಗಳು ಮತ್ತು ಕಿರಿಯ ಮಗನಿಗೆ ಸುಮಾರು 22 ವರ್ಷಗಳಾಗಿದೆ. ಹಿರಿಯ ಮಗ ಕುಟುಂಬವನ್ನು ನಿರ್ವಹಿಸುವ ರೈತ ಮತ್ತು ಕಿರಿಯ ಮಗ ಸೈನ್ಯದಲ್ಲಿ ಕಾನ್‌ಸ್ಟೆಬಲ್‌ ಆಗಿ ಸೇವೆ ಸಲ್ಲಿಸುತ್ತಿದ್ದಾನೆ ಎಂದು ಮಾಹಿತಿ ವಿವರಿಸಿದ್ದಾರೆ.

ಈ ಎಲ್ಲಾ ವಿವರಣೆ ಕೇಲೀದ ನ್ಯಾಯಾಲಯ "ಅಪರಾಧ ಸಂಭವಿಸಿದ ದಿನಾಂಕದಿಂದ ಈಗಾಗಲೇ 33 ವರ್ಷಗಳಿಗಿಂತಲೂ ಹೆಚ್ಚು ಸಮಯ ಕಳೆದಿದೆ ಎಂಬುದರಲ್ಲಿ ಯಾವುದೇ ವಿವಾದಗಳಿಲ್ಲ ಆದರೆ ನ್ಯಾಯದ ದೃಷ್ಟಿಯಲ್ಲಿ, ಆರೋಪದ ಸ್ವರೂಪ ಗಮನಿಸಿದರೆ ಈಗಾಗಲೇ ಅನುಭವಿಸಿದ ಶಿಕ್ಷೆಗಿಂತ ಕಡಿಮೆ ಶಿಕ್ಷೆ ವಿಧಿಸಲು ಅವಕಾಶವಿದೆ" ಎಂದಿದೆ.

SCROLL FOR NEXT