ದೇಶ

ಮಧ್ಯ ಪ್ರದೇಶ: 12 ದಿನದಲ್ಲಿ 18 ನವಜಾತ ಶಿಶುಗಳ ಸಾವು, ಸರ್ಕಾರಿ ಆಸ್ಪತ್ರೆಯ ಇಬ್ಬರು ವೈದ್ಯಾಧಿಕಾರಿ ಅಮಾನತು!

Srinivasamurthy VN

ಭೋಪಾಲ್: ಮಧ್ಯ ಪ್ರದೇಶ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ 12 ದಿನಗಳ ಅವಧಿಯಲ್ಲಿ 18 ನವಜಾತ ಶಿಶುಗಳು ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. 

ಮಧ್ಯಪ್ರದೇಶದ ಶಹ್ದೋಲ್ ಜಿಲ್ಲಾ ಆಸ್ಪತ್ರೆಯಲ್ಲಿ ಕೇವಲ 12 ದಿನಗಳಲ್ಲಿ 18 ಶಿಶುಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮೂಲಗಳ ಪ್ರಕಾರ ಶಹ್ದೋಲ್ ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಮ್‌ಹೆಚ್‌ಒ)  ಡಾ.ರಾಜೇಶ್ ಪಾಂಡೆ ಮತ್ತು ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ವಿಸಿ ಬರಿಯಾ ಅವರನ್ನು ಅವರ ಹುದ್ದೆಯಿಂಜ ವಜಾ ಮಾಡಲಾಗಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಪ್ರಭುರಾಮ್ ಚೌಧರಿ ಹೇಳಿದ್ದಾರೆ.

ಮಂಗಳವಾರ ಶಹ್ದೋಲ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಅವರು ತಪಾಸಣೆ ನಡೆಸಿದರು. ಸಚಿವರು ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತ ನವಜಾತ ಶಿಶುಗಳ ಆರೈಕೆ ಘಟಕ (ಎಸ್‌ಎನ್‌ಸಿಯು) ಮತ್ತು ಪೀಡಿಯಾಟ್ರಿಕ್ ಐಸಿಯು (ಐಸಿಯು) ಸೇರಿದಂತೆ ವಿವರವಾದ ತಪಾಸಣೆ ನಡೆಸಿದ್ದು, ಅಲ್ಲಿ 18 ಸಾವುಗಳು  ವರದಿಯಾಗಿವೆ. ಶಹ್ದೋಲ್ ಕ್ಷೇತ್ರದ ಬಿಜೆಪಿ ಸಂಸದ ಹಿಮಾದ್ರಿ ಸಿಂಗ್ ಸೇರಿದಂತೆ ಸ್ಥಳೀಯ ಸಾರ್ವಜನಿಕ ಪ್ರತಿನಿಧಿಗಳು ಡಾ.ಪ್ರಭೂರಂ ಚೌಧರಿ ಅವರೊಂದಿಗೆ ಆಸ್ಪತ್ರೆಗೆ ತೆರಳಿದ್ದರು.

ಭೇಟಿ ಬಳಿಕ ಮಾತನಾಡಿದ ಚೌದರಿ ಅವರು, 'ಆಸ್ಪತ್ರೆಯಲ್ಲಿ ಶಿಶುಗಳ ಸಾವಿನ ಬಗ್ಗೆ ಮುಖ್ಯಮಂತ್ರಿಗಳೂ ಸೇರಿದಂತೆ ಇಡೀ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಈಗಿರುವ 20 ಹಾಸಿಗೆಗಳ ಎಸ್‌ಎನ್‌ಸಿಯು ಜೊತೆಗೆ, ಶಹದೋಲ್ ಜಿಲ್ಲಾ ಆಸ್ಪತ್ರೆಯಲ್ಲಿ ಇನ್ನೂ 20 ಹಾಸಿಗೆಗಳ ಎಸ್‌ಎನ್‌ಸಿಯು ಮಂಜೂರಾಗಿದೆ.  ಸಾವಿನ ಸಂಖ್ಯೆ ಹೆಚ್ಚಾಗಲು ನಾವು ಬಯಸುವುದಿಲ್ಲ.  ಆಸ್ಪತ್ರೆಯಲ್ಲಿನ ಪ್ರಕರಣದ ಬಳಿಕ ಶಹಾದೋಲ್ ಮತ್ತು ಎರಡು ನೆರೆಯ ಜಿಲ್ಲೆಗಳ ಆರೋಗ್ಯ ಸೌಲಭ್ಯಗಳ ಬಗ್ಗೆ ತನಿಖೆ ನಡೆಸಲು ಎರಡು ತಂಡಗಳನ್ನು ಕಳುಹಿಸಲಾಗಿದೆ. ಆಸ್ಪತ್ರೆಯಲ್ಲಿನ ಸೌಲಭ್ಯಗಳನ್ನು ನವೀಕರಿಸಲಾಗುತ್ತಿದೆ. ಅಲ್ಲದೆ ಅನಾರೋಗ್ಯದಿಂದ  ಬಳಲುತ್ತಿರುವ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ಮಕ್ಕಳು / ಶಿಶುಗಳನ್ನು ಕಂಡುಹಿಡಿಯಲು ಎಎನ್‌ಎಂ ಮತ್ತು ಆಶಾ ಕಾರ್ಯಕರ್ತರಿಗೆ ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ಅನಾರೋಗ್ಯ ಪೀಡಿತ ಮಕ್ಕಳನ್ನು ಆಸ್ಪತ್ರೆಗೆ ಕರೆತರಲು ಪೋಷಕರು ವಿಳಂಬಮಾಡುತ್ತಿದ್ದಾರೆ. ಆರಂಭದಲ್ಲೇ ಆಸ್ಪತ್ರೆಗೆ ಮಕ್ಕಳನ್ನು ಕರೆತಂದರೆ ಸೂಕ್ತ ಚಿಕಿತ್ಸೆ ನೀಡಬಹುದು. ಸಾವನ್ನಪ್ಪಿದ ಶಿಶುಗಳ ಪೈಕಿ ಹೆಚ್ಚಿನ ಶಿಶುಗಳು ಉಸಿರಾಟದ ತೊಂದರೆ, ನ್ಯುಮೋನಿಯಾ, ಹೃದಯ ಸಮಸ್ಯೆ ಅಥವಾ  ಎನ್ಸೆಫಾಲಿಟಿಸ್ ರೋಗಲಕ್ಷಣಗಳಿಂದ ಜನಿಸುತ್ತಿದ್ದಾರೆ. ಇದು ಸಾವಿಗೆ ಕಾರಣ. ನಾವು ಈಗ ಅಂತಹ ಎಲ್ಲಾ ಅನಾರೋಗ್ಯದ ಶಿಶುಗಳು ಮತ್ತು ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ಅವರಿಗೆ ಪಿಎಚ್‌ಸಿ ಮತ್ತು ಸಿಎಚ್‌ಸಿಗಳಲ್ಲಿ ಅಗತ್ಯವಾದ ಔಷಧಿಗಳೊಂದಿಗೆ ಚಿಕಿತ್ಸೆ ನೀಡುತ್ತೇವೆ  ಮತ್ತು ಅತ್ಯಂತ ನಿರ್ಣಾಯಕ ಪ್ರಕರಣಗಳನ್ನು ಜಿಲ್ಲಾ ಆಸ್ಪತ್ರೆಗೆ ವರದಿ ಮಾಡುತ್ತೇವೆ" ಎಂದು ಆರೋಗ್ಯ ಸಚಿವರು ಹೇಳಿದರು.
 

SCROLL FOR NEXT