ದೇಶ

ರಾಜಕೀಯ ಸ್ವರೂಪದ ರೈತರ ಪ್ರತಿಭಟನೆ- ಕೇಂದ್ರ ಸಚಿವ ವಿ. ಕೆ. ಸಿಂಗ್ 

Nagaraja AB

ತಂಜಾವೂರ್: ಕೇಂದ್ರದ ನೂತನ ಮೂರು ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ರಾಜಕೀಯ ಸ್ವರೂಪದಿಂದ ಕೂಡಿದೆ ಎಂದು ಹೇಳಿರುವ ಕೇಂದ್ರ ಸಚಿವ ವಿ. ಕೆ. ಸಿಂಗ್, ರೈತರ ಕಲ್ಯಾಣವೇ ಎನ್ ಡಿಎ ಸರ್ಕಾರದ ಮುಖ್ಯ ಉದ್ದೇಶ ಎಂದಿದ್ದಾರೆ.

ರೈತರ ಜೊತೆಗಿನ ಸಂವಾದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ತಿಂಗಳಲ್ಲಿ ಏನು ಮಾಡಲಾಗಿದೆಯೋ ಅದರ ಬಗ್ಗೆ ನೈಜ ರೈತರು ಸಂತಸಗೊಂಡಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಮತ್ತು ಇತರ ವಿಷಯಗಳ ಬಗ್ಗೆ ಆತಂಕಗಳನ್ನು ನಿವಾರಿಸಲು ಪ್ರಯತ್ನಿಸಿದ್ದು, ಕನಿಷ್ಠ ಬೆಂಬಲ ಬೆಲೆ ಮುಂದುವರೆಯಲಿದೆ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಲಾಭವಾಗುವುದನ್ನು ಖಚಿತಪಡಿಸಿರುವುದಾಗಿ ಹೇಳಿದ ವಿಕೆ ಸಿಂಗ್, ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆ ರೈತರಿಗಿಂತ ಹೆಚ್ಚಾಗಿ ರಾಜಕೀಯ ಸ್ವರೂಪದ್ದಾಗಿದೆ ಎಂದರು.

ಕಾಂಗ್ರೆಸ್, ಎಎಪಿ, ಎನ್ ಸಿಪಿ ಸೇರಿದಂತೆ ಬಹುತೇಕ ಪಕ್ಷಗಳು ಎಪಿಎಂಸಿ ಕಾಯ್ದೆಯಿಂದ ರೈತರನ್ನು ಮುಕ್ತಗೊಳಿಸಲು ಬಯಸಿದ್ದವು, ಮೋದಿ ಸರ್ಕಾರ ವಿಮೆ, ಮಣ್ಣು ಕಾರ್ಡ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ರೈತರ ಕಲ್ಯಾಣಕ್ಕಾಗಿ ಜಾರಿಗೆ ತಂದಿದೆ ಎಂದು ವಿಕೆ ಸಿಂಗ್ ತಿಳಿಸಿದರು.

SCROLL FOR NEXT