ಗೆಹ್ಲೋಟ್ ಜೊತೆ ಗೋವಿಂದ್ ಸಿಂಗ್ ಡೋಟಾಸರ 
ದೇಶ

ಮೋದಿ ಸಂಪುಟದ ಎಲ್ಲಾ ಸಚಿವರು ಕಾಮಿಡಿಯನ್ ಗಳು: ರಾಜಸ್ಥಾನ ಕಾಂಗ್ರೆಸ್

ಮೋದಿ ಸರ್ಕಾರದ ಎಲ್ಲಾ ಕೇಂದ್ರ ಸಚಿವರು ಕಾಮಿಡಿಯನ್ ಗಳು ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ಡೋಟಸರ ಲೇವಡಿ ಮಾಡಿದ್ದಾರೆ.

ಜೈಪುರ: ಮೋದಿ ಸರ್ಕಾರದ ಎಲ್ಲಾ ಕೇಂದ್ರ ಸಚಿವರು ಕಾಮಿಡಿಯನ್ ಗಳು ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ಡೋಟಸರ ಲೇವಡಿ ಮಾಡಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್  ಅಶೋಕ್ ಗೆಹ್ಲೋಟ್ ಅವರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅತಾವಳೆ ಹೇಳಿಕೆಗೆ  ಪ್ರತಿಕ್ರಿಯಿಸಿರುವ ದೋಟಸರ ಈ ರೀತಿ ಹೇಳಿದ್ದಾರೆ.

ಮೋದಿ ಮಾತ್ರ ಸರ್ಕಾರ ನಡೆಸುತ್ತಿದ್ದಾರೆ, ಇದೊಂದು ಸುಳ್ಳಿನ ಮತ್ತು ಅಹಂಕಾರದ ಸರ್ಕಾರ, ರಾಮದಾಸ್ ಅಥಾವಳೆ ಒಂದು ಹೇಳಿಕೆ ನೀಡುತ್ತಾರೆ, ಇತರ ಕೇಂದ್ರ ಸಚಿವರು ಬೇರೆಯೇ ರೀತಿಯ ಹೇಳಿಕೆ ನೀಡುತ್ತಾರೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡೋಟಾಸರ ಟೀಕಿಸಿದ್ದಾರೆ.

ಸಚಿನ್ ಪೈಲಟ್ ಈಗ ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲ ಪಡೆಯುತ್ತಿದ್ದಾರೆ, ಶೀಘ್ರದಲ್ಲೇ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಪತನಗೊಳಿಸುತ್ತಾರೆ ಎಂದು ಅತಾವಳೆ ಹೇಳಿದ್ದರು. ಅತಾವಳೆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗದು ಏಕೆಂದರೇ ಮೋದಿ ಸರ್ಕಾರದ ಎಲ್ಲಾ ಸಚಿವರು ಕಾಮಿಡಿಯನ್ ಗಳು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಬಿಜೆಪಿ ಅವಿಶ್ವಾಸ ನಿರ್ಣಯಕ್ಕೆ ವಿರುದ್ಧವಾಗಿ ನಾವೆಲ್ಲರೂ ಬಹುಮತ ಸಾಬೀತು ಪಡಿಸುತ್ತೇವೆ ಎಂದು ಡೋಟಾಸರ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ-ಇರಾನ್ ಮಾತುಕತೆಯಲ್ಲಿ ಮಹತ್ವದ ಪ್ರಗತಿ: ಶಾಂತಿ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದ ಡೊನಾಲ್ಟ್ ಟ್ರಂಪ್, ಹಾರ್ಮುಜ್ ಜಲಸಂಧಿ ಪುನರಾರಂಭ ನಿರೀಕ್ಷೆ

ಅಮೆರಿಕ ಶ್ವೇತಭವನ ಬಳಿ ಮತ್ತೆ ಗುಂಡಿನ ದಾಳಿ: ಪ್ರತಿದಾಳಿಗೆ ಬಂದೂಕುಧಾರಿ ಸಾವು-Video

ಮಧ್ಯಪ್ರಾಚ್ಯ ಸಂಘರ್ಷ: ತುರ್ತು ಸಭೆ ಕರೆದ ಡೊನಾಲ್ಡ್ ಟ್ರಂಪ್; ವಾಷಿಂಗ್ಟನ್‌ಗೆ ಜೆಡಿ ವ್ಯಾನ್ಸ್ ದಿಢೀರ್ ವಾಪಸ್ಸು, ಕುತೂಹಲ ಮೂಡಿಸಿದ ಬೆಳವಣಿಗೆ..!

‘ಕಾಕ್‌ರೋಚ್ ಜನತಾ ಪಾರ್ಟಿ’ ಖಾತೆ ಬ್ಲಾಕ್: “BJPಗೆ ಭಯವೇಕೆ: ಪಿಣರಾಯಿ ವಿಜಯನ್ ಪ್ರಶ್ನೆ

Cockroach Janta Party ಬೆಳವಣಿಗೆ ಸಾರ್ವಜನಿಕ ಸಂಕಷ್ಟ ತೋರುತ್ತದೆ: ಪ್ರಶಾಂತ್ ಕಿಶೋರ್

SCROLL FOR NEXT