ದೇಶ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿ ಮೂವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಶೂಟರ್ ವರ್ತಿಕಾ ಸಿಂಗ್

Vishwanath S

ನವದೆಹಲಿ: ಕೇಂದ್ರ ಮಹಿಳಾ ಆಯೋಗದ ಸದಸ್ಯರನ್ನಾಗಿ ಮಾಡಲು ಹಣಕ್ಕಾಗಿ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಅಂತಾರಾಷ್ಟ್ರೀಯ ಶೂಟರ್ ವರ್ತಿಕಾ ಸಿಂಗ್ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಇನ್ನಿಬ್ಬರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸಂಸದ-ಶಾಸಕರ ಕೋರ್ಟ್ ವಿಚಾರಣೆಗೆ ಜನವರಿ 2ಕ್ಕೆ ನಿಗದಿಪಡಿಸಿದ್ದು ಪ್ರಕರಣವು ತನ್ನ ವ್ಯಾಪ್ತಿಗೆ ಒಳಪಡುತ್ತದೆಯೇ ಎಂದು ನಿರ್ಧರಿಸುತ್ತದೆ ಎಂದು ವರ್ತಿಕಾ ಸಿಂಗ್ ವಕೀಲರು ಹೇಳಿದ್ದಾರೆ.

ಸಚಿವೆ ಸ್ಮೃತಿ ಇರಾನಿ ಆಪ್ತರು ವರ್ತಿಕಾ ಸಿಂಗ್ ಗೆ ನಕಲಿ ಪತ್ರವೊಂದನ್ನು ನೀಡಿದ್ದು ಅದರಲ್ಲಿ ಕೇಂದ್ರ ಮಹಿಳಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ ಎಂದು ಶೂಟರ್ ಆರೋಪಿಸಿದ್ದಾರೆ.

ಕೇಂದ್ರ ಸಚಿವರ ಇಬ್ಬರು ಸಹಾಯಕರಾದ ವಿಜಯ್ ಗುಪ್ತಾ ಮತ್ತು ರಜನೀಶ್ ಸಿಂಗ್ ಅವರು ಮೊದಲಿಗೆ 1 ಕೋಟಿ ರೂ. ಬೇಡಿಕೆ ಇಟ್ಟರು ಮತ್ತು ನಂತರ ಅದನ್ನು 25 ಲಕ್ಷ ರೂ.ಗೆ ಇಳಿಸಿದರು ಎಂದು ವರ್ತಿಕಾ ಸಿಂಗ್ ಆರೋಪಿಸಿದ್ದಾರೆ.

SCROLL FOR NEXT